ಹೊಸದಾಗಿ ಆರಂಭಗೊಂಡ ಕಾಫಿ ಶಾಪ್ ಆರಂಭದಲ್ಲೇ ಕಳಪೆ ಮಟ್ಟದ ಒಂದು ವಸ್ತುವಿನಿಂದ ಶಾಪ್ ಸುಟ್ಟು ಭಸ್ಮ!

ಬೆಂಗಳೂರು:ಉತ್ತರ ತಾಲೂಕಿನ ಅಚ್ಯುತನಗರದಲ್ಲಿ ಗ್ಯಾಸ್ ಸೋರಿಕೆಯಿಂದ ಸಂಭವಿಸಿದ ಭೀಕರ ಅಗ್ನಿ ದುರಂತವೊಂದು ನಡೆದಿದೆ. ಉದ್ಘಾಟನೆಗೆ ಸಿದ್ಧವಾಗಿದ್ದ ಕಾಫಿ ಶಾಪ್ ಸುಟ್ಟು ಭಸ್ಮವಾಗಿಸಿದೆ. ಕಾಫಿ ಆಂಡ್ ಕೋ ಹೆಸರಿನ ಈ ಕಾಫಿ ಶಾಪ್ ಅನ್ನು ಭುವದಾಸ್ ಅವರು ಪ್ರಾರಂಭಿಸಲು ಸಜ್ಜಾಗಿದ್ದರು, ಸುಜಯ್ ಎಂಬುವರ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ಈ ದುರಂತದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಒಂದೇ ಸಮಾಧಾನ.
ದುರಂತದ ದಿನದಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ, ಕಾಫಿ ಶಾಪ್‌ಗೆ ಭಾರತ್ ಫ್ಯೂಲ್ ಏಜೆನ್ಸಿಯಿಂದ ಎರಡು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳನ್ನು ಖರೀದಿಸಲಾಗಿತ್ತು. ಖರೀದಿಯಾದ ಒಂದು ಗಂಟೆಯೊಳಗೆ, ಗ್ಯಾಸ್ ಸೋರಿಕೆಯಿಂದ ಸಿಲಿಂಡರ್‌ನಲ್ಲಿ ಬ್ಲಾಸ್ಟ್ ಸಂಭವಿಸಿದ್ದು, ಕಾಫಿ ಶಾಪ್ ಧಗಧಗನೆ ಹೊತ್ತಿ ಉರಿಯಿತು. ಈ ಘಟನೆಯಿಂದ ಕಾಫಿ ಶಾಪ್‌ನ ಒಳಗಿದ್ದವರು ಪವಾಡ ದೃಶ ರೀತಿಯಲ್ಲಿ ಪಾರಾಗಿದ್ದಾರೆ. ಆದರೆ, ಶಾಪ್‌ನ ಎಲ್ಲಾ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಕಾಫಿ ಶಾಪ್‌ನ ಸುತ್ತಮುತ್ತಲಿನ ಪ್ರದೇಶದಲ್ಲಿ ಕೇರಳದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರನ್ನು ಆಕರ್ಷಿಸುವ ಉದ್ದೇಶದಿಂದ ಕಾಫಿ ಆಂಡ್ ಕೋ ಶಾಪ್‌ನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗಿತ್ತು. ಸಂಜೆಯ ವೇಳೆಗೆ ಶಾಪ್‌ನ ಉದ್ಘಾಟನೆಗೆ ಎಲ್ಲ ಸಿದ್ಧತೆಗಳು ನಡೆದಿದ್ದವು. ಆದರೆ, ಬೆಳಿಗ್ಗೆ ನಡೆದ ಈ ದುರಂತವು ಎಲ್ಲ ಯೋಜನೆಗಳನ್ನು ಧ್ವಂಸಗೊಳಿಸಿತು.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಭಾರತ್ ಫ್ಯೂಲ್ ಏಜೆನ್ಸಿಯ ವಿರುದ್ಧ ಕಳಪೆ ಗುಣಮಟ್ಟದ ಸಿಲಿಂಡರ್ ಪೂರೈಕೆ ಮಾಡಿದ ಆರೋಪದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಘಟನೆಯ ಕಾರಣವನ್ನು ತನಿಖೆ ಮಾಡುತ್ತಿದ್ದಾರೆ.
ಕಾಫಿ ಶಾಪ್‌ನ ಪಕ್ಕದಲ್ಲೇ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್ ಇದ್ದು, ಘಟನೆ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಸಂಭವಿಸಿದ್ದರೆ, ಗಂಭೀರ ಸಾವು-ನೋವುಗಳು ಉಂಟಾಗುವ ಸಾಧ್ಯತೆಯಿತ್ತು. ಆದರೆ, ತಕ್ಷಣದ ಕ್ರಮದಿಂದ ಒಳಗಿದ್ದವರು ಸುರಕ್ಷಿತವಾಗಿ ಹೊರಬಂದಿದ್ದಾರೆ. ಈ ಘಟನೆಯು ಗ್ಯಾಸ್ ಸಿಲಿಂಡರ್‌ಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಈ ಘಟನೆಯು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವ ಅಗತ್ಯವನ್ನು ಒತ್ತಿಹೇಳಿದೆ. ವ್ಯಾಪಾರಿಗಳು ಮತ್ತು ಏಜೆನ್ಸಿಗಳು ಸಿಲಿಂಡರ್‌ಗಳನ್ನು ಪೂರೈಸುವ ಮೊದಲು ಕಟ್ಟುನಿಟ್ಟಾದ ಗುಣಮಟ್ಟ ತಪಾಸಣೆ ನಡೆಸಬೇಕು ಎಂಬ ಕರೆ ಜೋರಾಗಿದೆ.
ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.