ಎಕೆ-47 ಹಿಡಿದು ಮೋದಿ ಗೆ ಬೆದರಿಕೆ: ಬಾಲಕಿಯ ವಿಡಿಯೋ ವೈರಲ್

ಎಕೆ-47 ಹಿಡಿದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವ ಬಾಲಕಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಮಕ್ಕಳಲ್ಲಿ ದ್ವೇಷ ಮತ್ತು ಮೂಲಭೂತವಾದವನ್ನು ತುಂಬುವ ಅಪಾಯಕಾರಿ ಪ್ರವೃತ್ತಿಗೆ ಉದಾಹರಣೆಯಾಗಿದೆ.

ವೈರಲ್ ವೀಡಿಯೋದಲ್ಲಿ ಬಾಲಕಿ ಗಂಭೀರ ಮಾತುಗಳಿಂದ ಮೋದಿಯನ್ನು ಟಾರ್ಗೆಟ್ ಮಾಡಿದ್ದು, “ನಾನು ನಿಮ್ಮನ್ನು ಕೊಲ್ಲುತ್ತೇನೆ, ನನ್ನ ಬಳಿ ಸಾಕಷ್ಟು ಗುಂಡುಗಳಿವೆ” ಎಂಬ ಆತಂಕಕಾರಿ ಹೇಳಿಕೆ ನೀಡಿದ್ದಾಳೆ. ಈ ವಿಡಿಯೋ ಎಲ್ಲಿ ಮತ್ತು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯದ ವಿರುದ್ಧ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸರ್ಕಾರ ಇದಕ್ಕೆ ಗಂಭೀರ ಗಮನಹರಿಸಿ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
