Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರೈತನೂ ಉದ್ಯಮಿಯಾಗಬಹುದು: ಕರಡಗೆರೆಯ ದಂಪತಿಯಿಂದ ತೆಂಗಿನೆಣ್ಣೆ ಘಟಕ ಸ್ಥಾಪಿಸಿ ಮಾದರಿ ಸಾಧನೆ!

Spread the love

ಉಳುವವನೂ ಉದ್ಯಮಿಯಾಗಬೇಕು. ಬೆಳೆ ಬೆಳೆದರೆ ಸಾಲದು, ಬೆಳೆಯ ಮೌಲ್ಯ ಹೆಚ್ಚಲು ಅದನ್ನು ಒಂದು ಹಂತಕ್ಕಾದರೂ ಸಂಸ್ಕರಿಸಿ, ಮೌಲ್ಯವರ್ಧಿಸಿ ಮಾರಬೇಕು ಎಂದು ಕೃಷಿ ತಜ್ಞರು, ಪರಿಣತರು ಹೇಳುತ್ತಲೇ ಇರುತ್ತಾರೆ. ಆದರೆ, ರೈತರು ಸಂಸ್ಕರಿಸುವ ಗೋಜಿಗೆ ಹೋಗದೆ ಹೊಲದಲ್ಲೇ, ಕಣದಲ್ಲೇ ಮಾರಿಬಿಡುವ ಆತುರದ ಕೆಲಸ ಮಾಡುವುದರಲ್ಲಿ ಸದಾ ಮುಂದಿರುತ್ತಾರೆ.

ಆದರೆ, ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಕರಡಗೆರೆಯ ರೈತ ದಂಪತಿ ಮಮತಾ ಮತ್ತು ಕಿರಣ್ ಕುಮಾರ್‌ ಅವರು ಇದಕ್ಕೆ ಅಪವಾದ. 20 ಎಕರೆಯಲ್ಲಿ ತೆಂಗು ಬೆಳೆದಿರುವ ಈ ರೈತ ದಂಪತಿ ಮೌಲ್ಯವರ್ಧನೆ ಕುರಿತಂತೆ ಅಲ್ಲಲ್ಲಿ ವಿಚಾರಿಸುತ್ತಿದ್ದರು. ಆಗ, ತುರುವೇಕೆರೆ ತಾಲೂಕಿನ ಕೃಷಿ ಅಧಿಕಾರಿ ಪೂಜಾ ಅವರು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (ಕಪೆಕ್) ಮಾಹಿತಿ ನೀಡಿದ್ದಾರೆ. ಕಪೆಕ್‌ನ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ಪ್ರಣೀತ್ ಅವರನ್ನು ಪರಿಚಯಿಸಿಕೊಟ್ಟಿದ್ದಾರೆ.

ಕಪೆಕ್ ಸ್ಪಂದನೆಗೆ ದಂಪತಿ ಅಚ್ಚರಿ: ಮಮತಾ ಮತ್ತು ಕಿರಣ್ ದಂಪತಿಯ ಆಸಕ್ತಿ ಗುರುತಿಸಿದ ಪ್ರಣೀತ್ ಅವರು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆ (ಪಿಎಂಎಫ್‌ಎಂಇ) ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಣೀತ್ ಕೇಳಿದ ದಾಖಲೆಗಳನ್ನು ಾಟ್ಸಪ್ ಅಷ್ಟೇ ಮಾಡಿದ್ದು 2 ದಿನಗಳಲ್ಲಿ ಇಡೀ ಅರ್ಜಿದ್ದ ಮಾಡಿ ಪಿಡಿಎಫ್ ಕಳಿಸಿಕೊಟ್ಟರು. ‘ಪ್ರಿಂಟ್ ಔಟ್ ಬ್ಯಾಂಕಿಗೆ ಕೊಡಿ, ನೀವು ಎಣ್ಣೆ ತೆಗೆಯುವ ಘಟಕ ಶುರು ಮಾಡಲು ಸಾಲ ಕೊಡ್ತಾರೆ. ಅದಕ್ಕೆ ಕಪೆಕ್ ಶೇ.50 ಸಬ್ಸಿಡಿ ಕೊಡುತ್ತದೆ’ ಅಂತ ವಿವರಿಸಿದರು. ಅನುಮಾನದಲ್ಲಿಯೇ ಅವರು ಸೂಚಿಸಿದಂತೆ ತುರುವೇಕೆರೆಯ ಕೆನರಾ ಬ್ಯಾಂಕಿಗೆ ಹೋದರೆ ಅಲ್ಲೂ ರೇಷ್ಮಾ ಎಂಬ ಅಧಿಕಾರಿ ಅತ್ಯಂತ ವೇಗವಾಗಿ ಕೆಲಸ ಮಾಡಿಕೊಟ್ಟರು. ಕೆ13 ಲಕ್ಷ ಸಾಲಕ್ಕೆ ಕ6.7 ಲಕ್ಷ ಸಬ್ಸಿಡಿಯನ್ನೂ ಕೊಡಿಸಿದರು ಎಂದು ಮಮತಾ, ಕಿರಣ್ ಕುಮಾರ್ ಅವರು ಕಪೆಕ್‌ನಿಂದ ತಮ್ಮ ಬದುಕು ಬದಲಾದ ಬಗೆಯನ್ನು ಸಂತಸದಿಂದ ವಿವರಿಸಿದರು.

ಸಿದ್ಧವಾಯಿತು ಬಿಂದು ಬ್ಯಾಂಡ್: ತಾವು ಬೆಳೆಯುವ ಕೊಬ್ಬರಿಯಿಂದ ಎಣ್ಣೆ ತೆಗೆದು ಬಿಂದು ಹೆಸರಲ್ಲಿ ಮಾರಾಟ ಮಾಡುತ್ತಿದ್ದಾರೆ. ತೆಂಗಿನೆಣ್ಣೆ ತೆಗೆಯುವ, ಉತ್ಪನ್ನ ಸಿದ್ಧಗೊಳಿಸುವ ಕೆಲಸದಲ್ಲಿ ಮಮತಾ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಪತಿ ಕಿರಣ್ ಅವರು ಅದರ ಮಾರ್ಕೆಟಿಂಗ್, ಬ್ರಾಂಡಿಂಗ್‌ಗೆ ಹೆಚ್ಚು ಸಮಯ ನೀಡುತ್ತಾರೆ. ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿರುವ ಕಿರಣ್ ಅವರು ಬಿಂದು ತೆಂಗಿನ ಎಣೆಗೆ ವಿಜಯಪುರ, ರಾಜಸ್ಥಾನ, ಜಮ್ಮು ಕಾಶ್ಮೀರದಲ್ಲೂ ಗ್ರಾಹಕರನ್ನು ಹೊಂದಿದ್ದಾರೆ. ಅಷ್ಟು ಮಾತ್ರವಲ್ಲದೆ ಮುಂಬೈನಲ್ಲಿ ಕನ್ನಡಿಗರೇ ಕಟ್ಟಿರುವ ಕಲ್ಯಾಣಿ ಡ್ರಗ್ಸ್ ಎಂಬ ಔಷಧ ಕಂಪನಿಯು ಇವರಿಂದಲೇ ತೆಂಗಿನ ಎಣ್ಣೆ ಖರೀದಿಸುತ್ತಿದೆ. ಆನ್‌ಲೈನ್ ಸೌಲಭ್ಯದಿಂದ ಎಲ್ಲೆಡೆ ನಮ್ಮ ಬ್ರಾಂಡ್‌ಗೆ ಬೇಡಿಕೆ ಸೃಷ್ಟಿಯಾಗಿದೆ. ಆದರೆ ಎರಡು ತಿಂಗಳಿಂದ ಕೊಬ್ಬರಿ ಬೆಲೆ ಗಗನಕ್ಕೆ ಏರಿರುವುದರಿಂದ ಹಳೇದರಕ್ಕೆ ಎಣ್ಣೆ ನೀಡುವುದು ಸಾಧ್ಯವಾಗುತ್ತಿಲ್ಲ ಎಂದರು ಕಿರಣ್‌ ಕುಮಾರ್.

ಪಿಯುಸಿವರೆಗೆ ಓದಿರುವ ಮಮತಾ: ಅವರು ಗೃಹಿಣಿಯಾಗಿದ್ದರು. ಆದರೀಗ ಅವರು ಅತ್ಯಂತ ಬ್ಯೂಸಿ ಬ್ಯೂಸಿನೆಸ್ ವುಮನ್ ಆಗಿದ್ದಾರೆ. ಇವರ ಬಿಂದು ಬ್ರಾಂಡ್‌ಣ್ಣೆ ತಯಾರಿಸುವ ಜೊತೆಗೆ ತಮ್ಮ ಊರು ಹಾಗೂ ಅಕ್ಕಪಕ್ಕದ ರೈತರು ತರುವ ಕೊಬ್ಬರಿ, ಕಡ್ಲೆಬೀಜ ಹಾಗೂ ಮತ್ತಿತರ ಎಣ್ಣೆಕಾಳುಗಳಿಂದ ಎಣ್ಣೆ ತೆಗೆದು ಶುಲ್ಕ ಪಡೆಯುತ್ತಾರೆ. ನಾವು ಬೆಳೆಯುವ ಕೊಬ್ಬರಿ ಅಲ್ಲದೇ ರೈತರಿಂದಲೂ ಖರೀ ದಿಸಿ ಎಣ್ಣೆ ತೆಗೆದು ಮಾರುತ್ತಿದ್ದೇವೆ. ಇಬ್ಬರಿಗೆ ಕಾಯಂ ಉದ್ಯೋಗವನ್ನು ನೀಡಿದ್ದೇವೆ. ಕೆಲಸ ಹೆಚ್ಚಾದಾಗ, ಹೆಚ್ಚು ಕೆಲಸದವರನ್ನೂ ತೆಗೆದುಕೊಳ್ಳುತ್ತೇವೆ. ಇದರಿಂದ ಮನೆ ಕೆಲಸದ ನಂತರ ಸುಮ್ಮನೆ ಕಾಲ ಕಳೆಯುವ ಬದಲು ದುಡಿಮೆಮನೆಯ ಅಗತ್ಯಗಳನ್ನು ಪೂರೈಸುತ್ತಿದೆ ಎಂದರು ಮಮತಾ. ಈ ತಿಂಗಳು ಸಾಲ ತೀರಿಸಿ ಆಯಿತು ಎಂದರು.

ವಾರ್ಷಿಕ 8 ರಿಂದ 10 ಲಕ್ಷರು.ಗೂ ವಹಿವಾಟು ನಡೆಯು ತ್ತಿದೆ. ಕೊಬ್ಬರಿ ದರ ಏರದಿದ್ದರೆ ವಹಿವಾಟು ದುಪ್ಪಟ್ಟು ಮಾಡುವ ಆಲೋಚನೆ ಇತ್ತು. ನಮ್ಮ ಊರು ಆದಿಚುಂಚನಗಿರಿ ಶ್ರೀ ಕ್ಷೇತ್ರಕ್ಕೆ ಹತ್ತಿರವಿದೆ. ಅಲ್ಲಿಗೆ ಬರುವ ಅನೇಕ ಭಕ್ತಾದಿಗಳು ನಮ್ಮ ಗ್ರಾಹಕರಾಗಿದ್ದಾರೆ. ಕಪೆಕ್ ನಮಗೆ ವಿವಿಧ ಮೇಳಗಳಲ್ಲಿ ಉಚಿತವಾಗಿ ಮಳಿಗೆ ಕೊಡಿಸಿ ಉತ್ಪನ್ನದ ಪ್ರಚಾರ ಜನಪ್ರಿಯತೆಗೆ ಅನುಕೂಲವಾಗಿದೆ. ವಿಜಯಪುರದ ಸಿದ್ದೇಶ್ವರ ಮಠ ಸಮೀಪದ ಆರ್ಗಾನಿಕ್ ಸ್ಟೋರಲ್ಲಿ ಬಿಂದು ತೆಂಗಿನಎಣ್ಣೆ ಕಾಯಂ ಆಗಿ ಸಿಗುತ್ತದೆ. ನಮ್ಮಲ್ಲಿ ಒಮ್ಮೆ ಖರೀದಿಸಿದವರು ಮತ್ತೆ ಖರೀದಿಸುತ್ತಿರುವುದೇ ನಮ್ಮ ಸಕ್ಸಸ್ ಎನ್ನುತ್ತಾರೆ ಕಿರಣ್. ಮಾರ್ಗದರ್ಶನಕ್ಕೆ ಸಿದ್ಧ ಸಬ್ಸಿಡಿ ಪಡೆಯೋ ಸಲುವಾಗಿ ಮಾತ್ರ ಉದ್ಯಮ ಆರಂಭಿಸಲು ಹೋಗಬೇಡಿ. ಎಷ್ಟು ಕಡಿಮೆ ವೆಚ್ಚದಲ್ಲಿ ಶುರು ಮಾಡ್ತೀರೋ ಅಷ್ಟು ಬೇಗ ಲಾಭ ಪಡೆಯುತ್ತೀರಿ. ಪಿಎಂಎಫ್‌ಎಂಇ ಅತ್ಯಂತ ಉತ್ತಮ ಯೋಜನೆ.ಉದ್ಯಮಿ ಗಳಾಗಲು ಅಗತ್ಯ ನೆರವು ಮಾರ್ಗದರ್ಶನ ನೀಡಿದ್ದೇನೆ. ಆಸಕ್ತರಿಗೆ ಮಾರ್ಗದರ್ಶನ ಮಾಡಲು ಸದಾ ಸಿದ ಎನ್ನುತ್ತಾರೆ ಕಿರಣ್‌ ಕುಮಾರ್. ಬಿಂದು ತೆಂಗಿನ ಎಣ್ಣೆಗೆ ಸಂಪರ್ಕಿಸಿ 6366542135

ನೀವೂ ಉದ್ಯಮಿಗಳಾಗಿ: ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷರು. ವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ತ್‌ಲೈನ್ ಸಂಪರ್ಕಿಸಿ – 080 – 22271192 & 22271193, ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ.www.kappec. karnataka.gov.in ನಲ್ಲೂ ಲಭ್ಯ.


Spread the love
Share:

administrator

Leave a Reply

Your email address will not be published. Required fields are marked *