ಮಂಡ್ಯದಲ್ಲಿ ಪೈಶಾಚಿಕ ಕೃತ್ಯ: 8 ವರ್ಷದ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ!

ಮಂಡ್ಯ: ಜಿಲ್ಲೆಯಲ್ಲಿ ರಾಜ್ಯದಲ್ಲಿ ಪೈಶಾಚಿಕ ಕೃತ್ಯ ಎನ್ನುವಂತ ಘಟನೆ ಮಂಡ್ಯದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿ ಮೇಲೆ ವೃದ್ದನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ಸೋಮವಾರ ನಡೆದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೈಲೂರು ಗ್ರಾಮದಲ್ಲಿ 8 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವಂತ ಘಟನೆ ನಡೆದಿದೆ.
ಬಾಲಕಿ ಪೋಷಕರು ಕೂಲಿ ಕೆಲಸಕ್ಕೆ ಹೋದ ನಂತರ ಪಕ್ಕದ ಮನೆಯ ವೃದ್ದನೊಬ್ಬ ಮಗುವಿನ ಜೊತೆ ಕೆಲ ಹೊತ್ತು ಆಟವಾಡಿಕೊಂಡು ನಂತರ ಅಲ್ಲಿಂದ ಎತ್ತಿಕೊಂಡು ಹೋಗಿ ಅವರ ಮನೆಗೆ ತೆರಳಿದ್ದಾನೆ. ಸುಮಾರು ಸಮಯಗಳ ಕಾಲ ಮಗು ಕಾಣಿಸಿಕೊಳ್ಳದ್ದಾಗ ಪೋಷಕರು ಮತ್ತು ಅಕ್ಕ ಪಕ್ಕದ ಮನೆಯವರು ಹುಡುಕಾಟ ನಡೆಸಿದ್ದಾರೆ.

ಮಗುವಿನ ಹುಡುಕಾಟ ನಡೆಸುತ್ತಿರುವುದನ್ನು ಗಮನಿಸಿದ ವೃದ್ದ ಮಗುವನ್ನು ವೃದ್ದ ಹೊರಗೆ ಬಿಟ್ಟು ಕಳುಹಿಸಿದ್ದಾನೆ. ಆಕೆಯ ಪೋಷಕರು ಮಗುವಿನ ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಆಕೆಯನ್ನು ವಿಚಾರಿಸಿದಾಗ ವೃದ್ಧನ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
