ಪನೀರ್ ಊಟ ನೀಡಿಲ್ಲವೆಂದು ಮದುವೆ ಮನೆಯವರ ಮೇಲೆ ಬಸ್ ಹತ್ತಿಸಿದ ನೆಂಟ

ಸಾಮಾನ್ಯವಾಗಿ ಮದುವೆಯು ಸಂಭ್ರಮ ಸಡಗರದಿಂದ ಕೂಡಿ ಇರುತ್ತದೆ. ಅಲ್ಲದೆ, ಮದುವೆಗೆ ಸಂಬಂಧಿಕರ ಅತಿಥಿಗಳ ಅಗಮನವು ಮನೆಯವರಿಹಗೆ ಅಧಿಕ ಸಂತೋಷವನನ್ನು ನೀಡುತ್ತದೆ. ಮದುವೆಯಲ್ಲಿ ಮೊದಲು ನೆನಪಿಗೆ ಬರುವುದು ಭೋಜನ. ಆದರೆ, ಅನೇಕ ಮದುವೆಗಳಲ್ಲಿ ವ್ಯತ್ಯಾಸ ಆಗೋದು ಇಲ್ಲಿಯೇ.

ಊಟಕ್ಕೆ ಅದು ನೀಡಲಿಲ್ಲ, ಇದು ನೀಡಲಿಲ್ಲ ಎಂದು ಸಣ್ಣಪುಟ್ಟ ವಿಷಯಗಳಿಗೆ ಗಲಾಟೆಯಾಗಿ ಇಡೀ ಮದುವೆ ರದ್ದಾದ ಉದಾಹರಣೆಗಳು ಇವೆ. ಆದರೆ, ಇಲ್ಲೊಬ್ಬ ಒಂದು ಹೆಜ್ಜೆ ಮುಂದೋಗಿ ಮದುವೆ ಊಟದ ಪನ್ನೀರ್ ಬಡಸಲಿಲ್ಲ ಎಂದು ನೆಂಟರ ಮೇಲೆ ಬಸ್ ಹತ್ತಿಸಿದ ಘಟನೆ ಉತ್ತರಪ್ರದೇಶ ಚಂದೌಲಿ ಜಿಲ್ಲೆಯಲ್ಲಿ ನಡೆದಿದೆ.
ಮದುವೆಯಲ್ಲಿ ಪನೀರ್ ಬಡಿಸಲಿಲ್ಲ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಟ್ರಾವೆಲ್ ಬಸ್ ಅನ್ನು ಬ್ಯಾಂಕ್ವೆಟ್ ಹಾಲ್ ಮೇಲೆ ಹರಿಸಿದ್ದಾನೆ. ಇದರಿಂದಾಗಿ ಕೆಲವಷ್ಟು ನೆಂಟರು ಗಾಯಗೊಂಡಿದ್ದಾರೆ. ಅಲ್ಲದೆ, ಲಕ್ಷಾಂತರ ಮೌಲ್ಯದ ದುಬಾರಿ ಭಕ್ಷ್ಯಗಳು ನೆಲದ ಮೇಲೆ ಚೆಲ್ಲಿದ್ದಾವೆ.
ಘಟನೆ ಏನು..?
ರಾಜನಾಥ್ ಯಾದವ್ ಎಂಬುವರ ಪುತ್ರಿಯ ವಿವಾಹವು ಮುಘಲ್ಪರಾಯ್ ಕೊಟ್ಬಾಲಿ ಪ್ರದೇಶದ ಹಮೀಪುರ ಗ್ರಾಮದಲ್ಲಿ ನಡೆಯಿತು. ಶನಿವಾರ ಸಂಜೆ, ‘ಬರಾತ್’ (ಮದುವೆ ಮೆರವಣಿಗೆ) ಸ್ಥಳಕ್ಕೆ ತಡವಾಗಿ ಬಂದಿತು. ಈ ಸಂದರ್ಭದಲ್ಲಿ ಧರ್ಮೇಂದ್ರ ಯಾದವ್ ಎಂಬ ವ್ಯಕ್ತಿ ಮದುವೆಯಲ್ಲಿ ಊಟ ಮಾಡುತ್ತಿದ್ದಾರೆ. ಅವನು ಪನೀರ್ ಕೇಳಿದ್ದಾನೆ. ಇದಕ್ಕೆ ವಧು-ವರರು ಖಾಲಿಯಾಗಿದೆ ಅದಕ್ಕೆ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ಎಲ್ಲರ ಜತೆ ಕೋಪದಿಂದ ಗಲಾಟೆ ಮಾಡಿದ ಇತ, ಅಲ್ಲಿದ್ದ ಟ್ರಾವೆಲ್ ಬಸ್ ಅನ್ನು ಬ್ಯಾಂಕ್ವೆಟ್ ಹಾಲ್ ಕಡೆ ಏಕಾಏಕಿ ಹರಿಸಿದ್ದಾನೆ.
ಈ ಘಟನೆಯಲ್ಲಿ 3 ಲಕ್ಷ ರೂಪಾಯಿ ನಷ್ಟವಾಗಿದೆ. ಇದರಿಂದ ಮದುವೆ ಮಂಟಪದಲ್ಲಿ ಗದ್ದಲ ಉಂಟಾಗಿದೆ ತಕ್ಷಣ ಧರ್ಮೇಂದ್ರ ಯಾದವ್ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆಯಲ್ಲಿ ವರನ ತಂದೆ ಮತ್ತು ವಧುವಿನ ಚಿಕ್ಕಪ್ಪ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ವಾರಣಾಸಿಯ ಟ್ರಾಮಾ ಸೆಂಟರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗುವವರೆಗೂ ಮದುವೆ ನಡೆಯುವುದಿಲ್ಲ ಎಂದು ವರನ ಪ್ರತಿನಿಧಿಗಳು ಪಟ್ಟು ಹಿಡಿದ್ದಾರೆ. ಪರಿಣಾಮವಾಗಿ, ವಧುವಿನ ಕುಟುಂಬವು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿತು. ಮರುದಿನ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮದುವೆ ನಡೆದ ಕಾರಣ ಕಥೆ ಸುಖಾಂತ್ಯ ಕಂಡಿತು.