ವಾಟ್ಸಪ್ ನಲ್ಲಿ ಈ ಒಂದು ತಪ್ಪು ಮಾಡಿದ್ರೆ ನಿಮ್ಮ ಹಣನೂ ಹೀಗೆ ಮಾಯವಾಗತ್ತೆ!

ಚಿತ್ರದುರ್ಗ : ಪಟ್ಟಣದ ಯುವ ಉದ್ಯಮಿಯೊಬ್ಬರುವಾಟ್ಸ್ಆಯಪ್ಗೆ ಬಂದ ಅಶ್ಲೀಲ ಲಿಂಕ್ ಅನ್ನು ಡಿಲೀಟ್ ಮಾಡುವಾಗ ಕೆಲವೇ ನಿಮಿಷಗಳಲ್ಲಿ ಹಂತಹಂತವಾಗಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಡಿತವಾಗಿ ಆನ್ಲೈನ್ ವಂಚನೆಗೆ ಒಳಗಾಗಿದ್ದಾರೆ.
ಮಂಗಳವಾರ ಪಟ್ಟಣದ ಯುವ ಉದ್ಯಮಿಯೊಬ್ಬರ ಮೊಬೈಲ್ಗೆ ಅಶ್ಲೀಲ ಭಾವಚಿತ್ರವಿರುವ ಸಂದೇಶವೊಂದು ಬಂದಿದೆ.
ಅದನ್ನು ನೋಡಿದ ಕೂಡಲೇ ಡಿಲೀಟ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಆನ್ಲೈನ್ ವಂಚಕರು ಕಳಿಸಿದ ಅನಗತ್ಯ ಲಿಂಕ್ವೊಂದು ತೆರೆದು ಮೊಬೈಲ್ ನಿಷ್ಕ್ರಿಯವಾಗಿದೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ನಂತರ ಆನ್ ಮಾಡಿದರೂ ಮೊಬೈಲ್ ಹ್ಯಾಕ್ ಮಾಡಿದ ಸ್ಥಿತಿಯಲ್ಲಿಯೇ ಇತ್ತು. ನಂತರ ಮೊಬೈಲ್ ಪರದೆಯ ಮೇಲಿದ್ದ ಯೆಸ್ ಬಟನ್ ಒತ್ತಿದ್ದಾರೆ.
ಹೀಗೆ ಮಾಡಿದ ಕ್ಷಣಮಾತ್ರದಲ್ಲಿ ಹಂತ ಹಂತವಾಗಿ ಬ್ಯಾಂಕ್ ಖಾತೆಯಲ್ಲಿದ್ದ ಅಂದಾಜು ₹ 99,175 ಹಣ ಕಡಿತವಾಗಿದೆ. ತಕ್ಷಣವೇ ಪಟ್ಟಣದ ಕೆನರಾಬ್ಯಾಂಕ್ಗೆ ತೆರಳಿ ಆನ್ಲೈನ್ ಮೂಲಕ ಹಣ ಕಡಿತವಾಗುತ್ತಿರುವ ಬಗ್ಗೆ ಮಾಹಿತಿ ತಿಳಿಸಿದಾಗ ಬ್ಯಾಂಕ್ ಸಿಬ್ಬಂದಿ ಖಾತೆಯಿಂದ ಹಣ ಕಡಿತವಾಗುವುದನ್ನು ತಪ್ಪಿಸಿದ್ದಾರೆ.
ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಆನ್ಲೈನ್ ಮೂಲಕ ಪ್ರಕರಣ ದಾಖಲಿಸಿದ್ದಾರೆ.