Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಿಂದಿಯ ವಿರುದ್ಧ ಕನ್ನಡ ವಿದ್ಯಾರ್ಥಿಗಳ ಸಂಕಟ–ಪಾಸ್‌ಗಾಗಿ ಪತ್ರಿಕೆಯಲ್ಲಿ ಬೇಡಿಕೆ!

Spread the love

ಬೆಂಗಳೂರು : ಹಿಂದಿ ಹೇರಿಕೆ ವಿರುದ್ಧ ದಿನನಿತ್ಯ ಒಂದಲ್ಲ ಒಂದು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಕನ್ನಡವೇ ಬರದ ಬ್ಯಾಂಕ್ ಸಿಬ್ಬಂದಿಗಳನ್ನು ಕರ್ನಾಟಕದ ಹಳ್ಳಿಗಳಿಗೆ ಕೆಲಸಕ್ಕೆ ಆಯೋಜನೆ ಮಾಡುವುದರಿಂದ ಹಿಡಿದು ನಗರದ ಗಲ್ಲಿ ಗಲ್ಲಿಗಳಲ್ಲಿ ಉತ್ತರ ಭಾರತೀಯರ ಹಾವಳಿ ಜೋರಾಗಿತ್ತು.

ಆದರೆ ಕನ್ನಡ ಪರ ಹೋರಾಟಗಾರರು ಹಾಗೂ ಕನ್ನಡ ಪ್ರೇಮಿಗಳು ಹಿಂದಿ ಹೇರಿಕೆಯ ವಿರುದ್ಧ ತಿರುಗಿಬಿದ್ದಾಗಿನಿಂದ ಈ ಅಬ್ಬರ ತುಸು ಕಡಿಮೆಯಾಗಿದೆ ಎನ್ನಬಹುದು. ಇನ್ನು ಶಿಕ್ಷಣ ವ್ಯವಸ್ಥೆಯಲ್ಲಿಯೂ ಅನಗತ್ಯವಾಗಿ ಹಿಂದಿ ಸೇರ್ಪಡೆ ಮಾಡಿಕೊಂಡಿರುವುದರ ವಿರುದ್ಧ ಈ ಹಿಂದಿನಿಂದಲೂ ಅಸಮಾಧಾನವಿದೆ.

ಕನ್ನಡ ಹಾಗೂ ಇಂಗ್ಲಿಷ್ ದ್ವಿಭಾಷಾ ನೀತಿ ಸಾಕು ಹಿಂದೆ ಏಕೆ ಬೇಕು ಎಂದು ಹಲವರು ಹಿಂದಿ ಕಲಿಕೆಯೇ ಬೇಡ ಎಂದು ದನಿ ಎತ್ತಿದ್ದರು. ಇನ್ನು ಎಸ್‌ಎಲ್‌ಎಲ್‌ಸಿ ಬಳಿಕ ವಿದ್ಯಾರ್ಥಿಗಳು ಎಲ್ಲಿಯೂ ಕಲಿಯದ ಹಿಂದಿ ನಮಗೇಕೆ ಹಿಂದಿಯನ್ನು ತಿರಸ್ಕರಿಸಲು ಜನ ಹಿಂದಿನಿಂದಲೇ ನಿರ್ಧರಿಸಿದ್ದರು.

ಆದರೂ ಸಹ ಪಠ್ಯಗಳಲ್ಲಿ ಹಿಂದಿಯನ್ನು ತುರುಕಲಾಗಿದ್ದು, ಹಿಂದಿ ಬರದೇ ಪರದಾಡುವ ಅದೆಷ್ಟೋ ವಿದ್ಯಾರ್ಥಿಗಳು ಈ ಕಬ್ಬಿಣದ ಕಡಲೆಗೆ ಹೈರಾಣಾಗಿದ್ದಾರೆ. ಸದ್ಯ ಹಿಂದಿ ಪರೀಕ್ಷೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಕೆಲ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಪಾಸ್ ಮಾಡುವಂತೆ ಬೇಡಿಕೊಂಡಿದ್ದಾರೆ.

ಓರ್ವ ವಿದ್ಯಾರ್ಥಿ ಸರ್ ನಾನು ಪಾಸ್ ಆಗದಿದ್ದರೆ ನಮ್ಮ ಮನೆಯಲ್ಲಿ ಕಾಲೇಜಿಗೆ ಕಳುಹಿಸುವುದಿಲ್ಲ ದಯವಿಟ್ಟು ಪಾಸ್ ಮಾಡಿ ಎಂದು ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ. ಇನ್ನು ಈ ಉತ್ತರ ಪತ್ರಿಕೆಯ ಮೇಲೆ ಹಿಂದಿ ಇರುವುದನ್ನು ಕಾಣಬಹುದಾಗಿದೆ. ಅಲ್ಲದೇ ಮತ್ತೋರ್ವ ವಿದ್ಯಾರ್ಥಿ ಹಣ ಕೊಡುತ್ತೇನೆ ತನ್ನನ್ನು ಪಾಸ್ ಮಾಡಿ ಎಂದು ಬರೆದುಕೊಂಡಿದ್ದಾನೆ. ಸದ್ಯ ಈ ಎರಡೂ ಫೋಟೊಗಳು ವೈರಲ್ ಆಗಿದ್ದು, ಇದು ಯಾವ ಪರೀಕ್ಷೆಯ ಉತ್ತರ ಪತ್ರಿಕೆಗಳು ಎಂಬುದು ಮಾತ್ರ ಬಹಿರಂಗವಾಗಿಲ್ಲ.


Spread the love
Share:

administrator

Leave a Reply

Your email address will not be published. Required fields are marked *