ಓ ಮೈ ಲವ್! ನಾಲ್ಕು ವರ್ಷ ಲಿವ್ಇನ್ರ ಸಂಬಂಧ… ಮದ್ವೆ ದಿನ ಗಲಾಟೆ

ಉತ್ತರಪ್ರದೇಶ :ಲಿವ್ ಇನ್ ಸಂಬಂಧದಲ್ಲಿ ಇದ್ದ ತನ್ನ ಸ್ನೇಹಿತೆ ಬೇರೆ ಹುಡುಗನ ಜೊತೆ ಮದ್ವೆಯಾಗ್ತಿರೋದಕ್ಕೆ ಹುಡುಗಿಯೊಬ್ಬಳು ಹಂಗಾಮಾ ಸೃಷ್ಟಿಸಿದ್ದಾಳೆ. ಏನಿದು ಸ್ನೇಹಿತೆಯರ ಲವ್ ಸ್ಟೋರಿ?
ತನ್ನ ಸ್ನೇಹಿತ ಬೇರೆ ಮದ್ವೆಯಾಗ್ತಿದ್ರೆ ಸ್ನೇಹಿತೆ ಬಂದು ಮದ್ವೆ ತಪ್ಪಿಸಿರೋದನ್ನು ಕೇಳಿರ್ತೀರಿ, ಹಾಗೆನೇ ಸ್ನೇಹಿತೆ ಬೇರೊಬ್ಬನ ಜೊತೆ ಹೋದ್ರೆ ಸ್ನೇಹಿತ ಗಲಾಟೆ ಮಾಡುವುದೂ ಗೊತ್ತು. ಆದರೆ ಇಲ್ಲಿ ಆಗಿದ್ದೇ ಬೇರೆ. ತನ್ನ ಸ್ನೇಹಿತೆ ಮದ್ವೆಯಾಗಿದ್ದಾಳೆ ಎಂದು ಆಕೆಯ ಸ್ನೇಹಿತೆಯೇ ಬಂದು ಮದ್ವೆ ತಪ್ಪಿಸಿದ್ದಾಳೆ. ಹಾಗಂತ ಆಕೆ ಮದ್ವೆಯಾಗ್ತಿರೋ ಹುಡುಗ ತನಗೆ ಬೇಕಾದವರ ಅಂತಲ್ಲ, ಆದ್ರೆ ಆ ಸ್ನೇಹಿತೆ ತನ್ನ ಲಿವ್ ಇನ್ ಪಾರ್ಟನರ್ ಎನ್ನುವ ಕಾರಣಕ್ಕೆ!! ಹೌದು. ಕೇಳಲು ಸ್ವಲ್ಪ ಕನ್ಫ್ಯೂಸ್ ಎನ್ನಿಸಿದರೂ ಇದು ನಿಜ. ನಾಲ್ಕು ವರ್ಷ ಲಿವ್ ಇನ್ನಲ್ಲಿ ಇದ್ದ ತನ್ನ ಗೆಳತಿ ಇದೀಗ ಹುಡುಗನ ಜೊತೆ ಮದ್ವೆಯಾಗ್ತಿರೋದಕ್ಕೆ ಯುವತಿಯೇ ಗಲಾಟೆ ಮಾಡಿ ಮದ್ವೆ ನಿಲ್ಲಿಸಿರೋ ಘಟನೆ ನಡೆದಿದೆ.
ಉತ್ತರ ಪ್ರದೇಶದ ಅಲಿಗಢದಲ್ಲಿ ಈ ಘಟನೆ ನಡೆದಿದೆ. ಆಗಿದ್ದೇನೆಂದರೆ, ಬುಲಂದ್ಶಹರ್ನ ಪಹಸು ಪೊಲೀಸ್ ಠಾಣೆ ಪ್ರದೇಶದ ಎಂ.ಎ ಪಾಸ್ ಆಗಿರುವ ಯುವತಿಯ ವಿವಾಹವು ಅಲಿಗಢದ ಕ್ವಾರ್ಸಿ ಪ್ರದೇಶದ ಯುವಕನೊಂದಿಗೆ ನಿಶ್ಚಯಿಸಲಾಗಿತ್ತು. ಇಬ್ಬರ ಎಂಗೇಜ್ಮೆಂಟ್ ನಡೆಯುತ್ತಿತ್ತು. ವರ ಮತ್ತು ವಧು ಇಬ್ಬರೂ ವೇದಿಕೆಯ ಮೇಲೆ ನಿಂತಿದ್ದರು. ಅಷ್ಟರಲ್ಲಿ ಪ್ಯಾಂಟ್ ಮತ್ತು ಶರ್ಟ್ ಧರಿಸಿದ ಮತ್ತೊಬ್ಬ ಹುಡುಗಿ ಬೀನಾ ಅಲ್ಲಿಗೆ ಬಂದು ವಧುವಿನ ಕೈ ಹಿಡಿದು ತನ್ನೊಂದಿಗೆ ಎಳೆದೊಯ್ದಳು. ಈ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಸ್ಥಳದಲ್ಲಿ ಗದ್ದಲ ಉಂಟಾಯಿತು. ಆರಂಭದಲ್ಲಿ ಎಲ್ಲರಿಗೂ ಯುವಕನ ಮೇಲೆ ಡೌಟ್ ಬಂತು. ಆ ಯುವಕ, ಈ ಯುವತಿಯ ಲವರ್ ಇರಬಹುದು ಎಂದು. ಆದರೆ ಅಲ್ಲಿ ಆಗಿದ್ದೇ ಬೇರೆ. ಬೀನಾ ಮತ್ತು ವಧುವಾಗಿದ್ದ ಯುವತಿ ಇಬ್ಬರೂ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿರುವುದಾಗಿ ಗೊತ್ತಾಗಿದೆ. ಆದರೆ, ವಧುವಿನ ವೇಷ ಧರಿಸಿದ್ದ ಹುಡುಗಿ ಇದನ್ನು ನಿರಾಕರಿಸಿದಳು. ಇಬ್ಬರ ನಡುವೆ ಮಾತಿನ ಚಕಮಕಿಯಾಗಿ ಪೊಲೀಸರ ಪ್ರವೇಶವಾಯಿತು.