ಮಣಿಪಾಲದಲ್ಲಿ ಒಂದೇ ಸ್ಕೂಟಿಯಲ್ಲಿ ಐವರು: ಅಪ್ರಾಪ್ತ ವಿದ್ಯಾರ್ಥಿಗಳಿಂದ ಸಂಚಾರ ನಿಯಮ ಉಲ್ಲಂಘನೆ

ಉಡುಪಿ: ಮಣಿಪಾಲದಲ್ಲಿ ಒಂದೇ ಸ್ಕೂಟಿಯಲ್ಲಿ ಐವರು ಕುಳಿತು ನಿಯಮ ಉಲ್ಲಂಘಿಸಿ ಸಂಚಾರ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಣಿಪಾಲ ಪೊಲೀಸರು ಸ್ಕೂಟಿಯನ್ನು ಭಾನುವಾರ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏ. 17ರಂದು ರಾತ್ರಿ ಈ ಘಟನೆ ನಡೆದಿತ್ತು. ಸ್ಕೂಟಿ ಸವಾರರು ಹಾಗೂ ಸ್ಕೂಟಿಯನ್ನು ಪತ್ತೆಹಚ್ಚಲಾಗಿದ್ದು, ಐವರು ಸವಾರರ ಪೈಕಿ ಮೂವರು ಅಪ್ರಾಪ್ತರು ಎನ್ನಲಾಗಿದೆ.ಈ ಐವರು ವಿದ್ಯಾರ್ಥಿಗಳಾಗಿದ್ದಾರೆ. ಸ್ಕೂಟಿ ಚಾಲನೆ ಮಾಡುತ್ತಿದ್ದ ಸವಾರನಿಗೆ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ, ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದ ತಪ್ಪಿಗಾಗಿ 10,500 ರೂ. ದಂಡ ವಿಧಿಸಲಾಗಿದೆ.