ಹಂಪಾಪುರದಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ: 65 ವರ್ಷದ ಆರೋಪಿ ಬಂಧನ

ಹಂಪಾಪುರ(ಮೈಸೂರು): ಬೇಸಿಗೆ ರಜೆಗೆ ಪೋಷಕರೊಂದಿಗೆ ಗ್ರಾಮದ ಜಮೀನಿಗೆ ಬಂದಿದ್ದ 13 ವರ್ಷದ ಬಾಲಕಿಯನ್ನು ಕುಟುಂಬಕ್ಕೆ ಆಪ್ತನಾಗಿದ್ದ 65 ವರ್ಷದ ವೃದ್ಧ ಅತ್ಯಾಚಾರ ಎಸಗಿದ್ದು, ಎಚ್.ಡಿ.ಕೋಟೆ ಪೊಲೀಸರು ಪೋಕ್ಸ್ ಪ್ರಕರಣದಡಿ ಆತನನ್ನು ಬಂಧಿಸಿದ್ದಾರೆ.

ಆರೋಪಿ ಮರಿಗೌಡ(65)ನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಬಾಲಕಿಯ ಪೋಷಕರು ಆರೋಪಿಯ ಗ್ರಾಮದಲ್ಲಿ ಜಮೀನು ಹೊಂದಿದ್ದು, ಆಗಾಗ ಮರಿಗೌಡನ ಮನೆಗೆ ಹೋಗುತ್ತಿದ್ದರು ಎಂಬ ಮಾಹಿತಿ ಇದೆ. ಏ.11 ರಂದು ಕೃತ್ಯ ನಡೆದಿತ್ತು. ಬೇಸಿಗೆ ರಜೆಯಲ್ಲಿ ಬಾಲಕಿಯು ಪೋಷಕರೊಂದಿಗೆ ಜಮೀನಿಗೆ ಬಂದಿದ್ದ ವೇಳೆ ‘ತಾತ’ ಎಂಬಷ್ಟು ಆಪ್ತನಾಗಿದ್ದ ಆರೋಪಿ ಅತ್ಯಾಚಾರ ನಡೆಸಿದ್ದನು ಎಂದು ದೂರು ದಾಖಲಾಗಿತ್ತು. ಎಚ್.ಡಿ.ಕೋಟೆ ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
