AI ಮ್ಯಾಜಿಕ್: 5 ವರ್ಷದ ದವಡೆ ನೋವನ್ನು ಒಂದೇ ನಿಮಿಷದಲ್ಲಿ ನಿವಾರಿಸಿತು Chat GPT

ಇಂದಿನ ಅತ್ಯಾಧುನಿಕ ಯುಗದಲ್ಲಿ ಮಾನವನಿಗಿಂತ ಒಂದೆಜ್ಜೆ ಮುಂದೆ ಎಂಬಂತೆ ಟೆಕ್ನಲಾಜಿ ಮುಂದಿದೆ. ಮೊಬೈಲ್, ರೋಬಾಟ್ ಸೇರಿದಂತೆ AI ಹಾಗೂ ChatGPTಗಳ ತಂತ್ರಜ್ಞನ ಸಹಾಯದಿಂದ ಮಾನವನಿಗೆ ಅಸಾಧ್ಯವಾದ ಕೆಲಸಗಳನ್ನು ಸಾಧ್ಯವಾಗುವಂತೆ ಮಾಡಿಕೊಂಡಿದ್ದೇವೆ. ಇದೀಗ ChatGPT ಸಹಾಯದಿಂದ ವ್ಯಕ್ತಿಯೊಬ್ಬ ಕೇವಲ 60 ಸೆಕೆಂಡುಗಳಲ್ಲಿ 5 ವರ್ಷದ ದವಡೆ ನೋವುನ್ನು ನಿವಾರಿಸಿಕೊಂಡಿರುವ ಅಚ್ಚರಿ ಘಟನೆ ನಡೆದಿದೆ.

ಹೌದು, ಇದು ನಂಬಲು ಅಸಾಧ್ಯವಾದರೂ ನಂಬಲೆಬೇಕು. ಕಳೆದ 5 ವರ್ಷಗಳಿಂದ ದವಡೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿನ ಹಂಚಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಚಕಿತಗೊಳಿಸಿದ್ದಾನೆ.
ತನ್ನ 5 ವರ್ಷದ ದವಡೆ ಸಮಸ್ಯೆಯನ್ನು ಚಾಟ್ಜಿಪಿಟಿ ಸರಿಪಡಿಸಿದೆ ಎಂದು ಸಾಮಾಜಿಕ ಬಳಕೆದಾರರೊಬ್ಬರು ರೆಡ್ಡಿಟ್ ವೇದಿಕೆಯಲ್ಲಿ ಹಂಚಿಕೊಂಡಿದ್ದು, ಇದೀಗ ವೈದ್ಯಕೀಯ ವಲಯದಲ್ಲಿ AI ಪಾತ್ರದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಬಳಕೆದಾರ ಹೇಳಿದ್ದೇನು..?
ಬಹುಶಃ ಅದು ಬಾಕ್ಸಿಂಗ್ ಗಾಯದ ಕಾರಣದಿಂದ 5 ವರ್ಷಗಳಿಂದ ಎಡಭಾಗದಲ್ಲಿನ ದವಡೆಯು ನೋವು ಇತ್ತು. ಆ ನೋವು ನಿರಂತರವಾಗಿ ಇರುತ್ತಿರಲಿಲ್ಲ. ಆಗಾಗಾ ಬಂದು ಹೋಗುತ್ತಿತ್ತು. ಇದು ಶಾಶ್ವತ ನೋವು ಎಂದು ನಾನು ಭಾವಿಸಿದೆ. ನಿನ್ನೆ, ನಾನು ಅದರ ಬಗ್ಗೆ ChatGPT ಅನ್ನು ಕೇಳಿದೆ ಮತ್ತು ನನ್ನ ದವಡೆಯಲ್ಲಿನ ಡಿಸ್ಕ್ ಬಹುಶಃ ಸ್ವಲ್ಪ ಸ್ಥಳಾಂತರಗೊಂಡಿದೆ. ಆದರೆ, ಇನ್ನೂ ಚಲಿಸಬಲ್ಲದು ಎಂದು ನನಗೆ ವಿವರವಾದ ವಿವರಣೆಯನ್ನು ನೀಡಿತು.
ನನ್ನ ನಾಲಿಗೆಯನ್ನು ನನ್ನ ಬಾಯಿಯ ಛಾವಣಿಯ(ಮೇಲ್ಭಾಗ) ಇಟ್ಟುಕೊಂಡು ಸಮ್ಮಿತಿಯನ್ನು ವೀಕ್ಷಿಸುವಾಗ ನಿಧಾನವಾಗಿ ನನ್ನ ಬಾಯಿ ತೆರೆಯಲು ನಿರ್ದಿಷ್ಟ ಮಾರ್ಗವನ್ನು ಸೂಚಿಸಿದೆ. ನಾನು ಗರಿಷ್ಠ ಒಂದು ನಿಮಿಷದ ಸೂಚನೆಗಳನ್ನು ಅನುಸರಿಸಿದ್ದೇನೆ ಅಷ್ಟೇ. ಅದು, ಇದ್ದಕ್ಕಿದ್ದಂತೆ… (ಕ್ಲಿಕ್ ಇಲ್ಲ) ನೋವು ಮಾಯವಾಯಿತು. ಈ AI ನನಗೆ ಒಂದು ನಿಮಿಷದಲ್ಲಿ ಪರಿಹಾರವನ್ನು ನೀಡಿತು ಎಂದು ಬರೆದುಕೊಂಡಿದ್ದಾನೆ. ಇದೀಗ ಇತನ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ನೆಟ್ಟಿಗರು ರಿಯಾಕ್ಟ್ ಹೇಗಿದೆ..?
ಇತನ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದ, ಸಾಕಷ್ಟು ಜನರನ್ನು ಆಕರ್ಷಿಸಿದೆ. ಅಲ್ಲದೆ, ತರೆಹೇವಾರ ಕಾಮೆಂಟ್ಗಳು ಹರಿದು ಬರುತ್ತೀವೆ. ನನ್ನ ನಿದ್ರೆಯ ಸಮಸ್ಯೆಗಳ ಬಗ್ಗೆ ವರ್ಷಗಳ ಇತರ ಸಂಶೋಧನೆಗಳು ಮತ್ತು ಒಂದು ದಶಕದ ವೈದ್ಯರ ಭೇಟಿಗಿಂತ GPT ಯೊಂದಿಗೆ 15 ನಿಮಿಷಗಳಲ್ಲಿ ನಾನು ಕಂಡುಕೊಂಡೆ ಕಾಮೆಂಟ್ ಮಾಡಿದ್ದಾರೆ.
