Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗೂಗಲ್‌ ಕಂಪೆನಿಯಲ್ಲಿಯೂ ಸಹ ಬಿಟ್ಟಿಲ್ಲ ಉದ್ಯೋಗ ಕಡಿತ-ಹೈದರಾಬಾದ್-ಬೆಂಗಳೂರು ಕೇಂದ್ರಗಳಲ್ಲಿ ಉದ್ಯೋಗದ ಕ್ರೈಸಿಸ್

Spread the love

ಹೈದರಾಬಾದ್ : ಭಾರತೀಯ ಮೂಲದ ಸುಂದರ್ ಪಿಚೈ ನೇತೃತ್ವದ ಗೂಗಲ್ ಮತ್ತೊಮ್ಮೆ ತನ್ನ ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ಮಾಡಿಕೊಂಡಿದೆ. ಇದು ಭಾರತದ ಗೂಗಲ್ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವುದಂತೂ ಖಚಿತವಾಗಿದೆ. ಭಾರತದಲ್ಲಿ ಜಾಹೀರಾತು, ಮಾರಾಟ ಮತ್ತು ಮಾರ್ಕೆಟಿಂಗ್ ತಂಡಗಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಕೆಲಸ ಕಳೆದುಕೊಳ್ಳುವುದು ಖಚಿತ ಎನ್ನಲಾಗಿದೆ. ಈ ಮೂಲಕ ಯಾವುದೇ ಖಾಸಗಿ ವಲಯ ಕಂಪೆನಿಯಲ್ಲಿನ ಉದ್ಯೋಗಕ್ಕೆ ಭದ್ರತೆ ಇಲ್ಲ. ಭವಿಷ್ಯದಲ್ಲಿ ಉದ್ಯೋಗವು ಕಷ್ಟವಾಗಿದೆ ಮತ್ತು ಯಾವುದೇ ಉದ್ಯೋಗ ಭದ್ರತೆ ಇರುವುದಿಲ್ಲ ಎಂಂಬುದು ಇದರಿಂದ ಸ್ಪಷ್ಟವಾಗಿದೆ. ಯಾವುದೇ ಉನ್ನತ ಕಂಪೆನಿಯಲ್ಲಿ ಕೂಡ ಉದ್ಯೋಗ ಅಭದ್ರತೆ ಎಂಬುದು ಸ್ಷಷ್ಟವಾಗಿದೆ. ಮುಖ್ಯವಾಗಿ ಬಹಳ ವಿಸ್ತಾರವಾಗಿರುವ ಹೈದರಾಬಾದ್ ಮತ್ತು ಬೆಂಗಳೂರಿನ ಕಚೇರಿಗಳಲ್ಲೇ ಹೆಚ್ಚು ಉದ್ಯೋಗ ಕಡಿತ ಇರಲಿದೆ ಎಂದು ವರದಿ ತಿಳಿಸಿದೆ. ಗೂಗಲ್ ಅಧಿಕೃತವಾಗಿ ಉದ್ಯೋಗ ಕಡಿತದ ನಿಖರ ಸಂಖ್ಯೆಯನ್ನು ಹೇಳಿಲ್ಲವಾದರೂ ಜಾಹೀರಾತು, ಮಾರಾಟ ಮತ್ತು ಮಾರ್ಕೆಟಿಂಗ್ ತಂಡದಲ್ಲಿರುವ ಬಹುತೇಕ ಉದ್ಯೋಗಿಗಳು ವಜಾಗೊಳಿಸುವಿಕೆಯ ತೂಗುಗತ್ತಿಯಲ್ಲಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಆಂಡ್ರಾಯ್ಡ್, ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳು ಮತ್ತು ಕ್ರೋಮ್ ಬ್ರೌಸರ್‌ಗಳನ್ನು ನೋಡಿಕೊಳ್ಳುವ ತನ್ನ ಪ್ಲಾಟ್‌ಫಾರ್ಮ್‌ಗಳು ಮತ್ತು ಬಿಡಿಭಾಗದ ಸಾಧನಗಳ ವಿಭಾಗದಲ್ಲಿ ನೂರಾರು ಉದ್ಯೋಗಗಳನ್ನು ಕಡಿತಗೊಳಿಸುವ ಗೂಗಲ್‌ನ ಇತ್ತೀಚಿನ ನಿರ್ಧಾರದ ನಂತರ ಈ ಕ್ರಮಕ್ಕೆ ತೀರ್ಮಾನ ತೆಗೆದುಕೊಂಡಿದೆಯಂತೆ.

ಗೂಗಲ್ ತನ್ನ ಕಾರ್ಯಚರಣೆಯನ್ನು ಪ್ರಬುದ್ಧಗೊಳಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಿರಂತವಾಗಿ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಉದ್ಯೋಗಿಗಳನ್ನು ತೆಗೆದು ಹಾಕುತ್ತಿದೆ.

ಈ ವರ್ಷದ ಆರಂಭದಲ್ಲಿ ಕಂಪನಿಯು ತನ್ನ ಪ್ಲಾಟ್‌ಫಾರ್ಮ್‌ಗಳು ಮತ್ತು ಸಾಧನಗಳ ತಂಡಗಳನ್ನು ಒಗ್ಗೂಡಿಸಿ ಒಂದೆ ತಂಡವಾಗಿ ವಿಲೀನಗೊಳಿಸಿತು. ಈ ಬೆಳವಣಿಗೆ ನಂತರ ಬಹುತೇಕರು ಉದ್ಯೋಗದ ಅಭದ್ರತೆ ಹಿನ್ನೆಲೆ ಸ್ವಯಂಪ್ರೇರಿತವಾಗಿ ಕಂಪೆನಿಯಿಂದ ನಿರ್ಗಮಿಸಿದರು. ಇದರ ಜೊತೆಗೆ ಉದ್ಯೋಗ ಕಡಿತಗಳು ಕೂಡ ಆರಂಭವಾಯಿತು. ಕಂಪನಿಯು ಹೆಚ್ಚು ಚುರುಕಾದ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವವರತ್ತ ಗಮನಹರಿಸುತ್ತಿದೆ ಎಂದು Google ವಕ್ತಾರರು ಹೇಳಿದ್ದಾರೆ. ಗೂಗಲ್ ಕಂಪೆನಿಯ ವಿಭಾಗಗಳಲ್ಲಿ ತಂಡವನ್ನು ಪುನರ್‌ ರಚನೆ ಮಾಡಲು ಮುಂದಾಗಿದ್ದು, ಭವಿಷ್ಯದ ದಿನಗಳಲ್ಲಿ ಭಾರತೀಯ ಉದ್ಯೋಗಿಗಳಿಗೆ ಅನಿಶ್ಚಿತತೆ ಬರುವುದಂತೂ ಖಂಡಿತ. ಗೂಗಲ್ ಕಳೆದ ವಾರ ಆಂಡ್ರಾಯ್ಡ್ ಸಾಫ್ಟ್‌ವೇರ್, ಪಿಕ್ಸೆಲ್ ಸಾಧನಗಳು ಮತ್ತು ಕ್ರೋಮ್ ಬ್ರೌಸರ್‌ನಲ್ಲಿ ಕೆಲಸ ಮಾಡುವ ತಂಡಗಳು ಸೇರಿದಂತೆ ವಿವಿಧ ವಿಭಾಗಗಳಿಂದ ನೂರಾರು ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ವರದಿ ತಿಳಿಸಿದೆ. ಮುಂಬರುವ ವಾರಗಳು ಭಾರತೀಯ ತಂಡಗಳ ಮೇಲೆ ಇದರ ಪರಿಣಾಮ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದರ ಬಗ್ಗೆ ಕಾದು ನೋಡಬೇಕಿದೆ.


Spread the love
Share:

administrator

Leave a Reply

Your email address will not be published. Required fields are marked *