2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಎಂಟ್ರಿ! ಪೊಮೋನಾ ನಗರದಲ್ಲಿ ಟಿ20 ಸ್ಪರ್ಧೆ

ದುಬೈ :ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಕ್ರಿಕೆಟಿಗೂ ಬಾಗಿಲು ತೆರೆದಿರುವುದು ಈಗಾಗಲೇ ಸುದ್ದಿಯಾಗಿದೆ. ಈ ಪಂದ್ಯಗಳನ್ನು ಸೌತ್ ಕ್ಯಾಲಿಫೋರ್ನಿಯಾದ ಪೊಮೋನಾ ನಗರದಲ್ಲಿ ಆಡಲಾಗುವುದು ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಬುಧವಾರ ಪ್ರಕಟಿಸಿದರು.
ಈ ನಗರ ಲಾಸ್ ಏಂಜಲೀಸ್‌ನಿಂದ 48 ಕಿ.ಮೀ. ದೂರದಲ್ಲಿದೆ. ಇಲ್ಲಿನ ಫೈರ್‌ಗ್ರೌಂಡ್ಸ್ ಅಥವಾ ಫೈರ್‌ಪ್ಲೆಕ್ಸ್ ಎಂದು ಕರೆಯಲ್ಪಡುವ ಮೈದಾನದಲ್ಲಿ ಸ್ಪರ್ಧೆ ಏರ್ಪಡಲಿದೆ.

128 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಪಾಲಿನ ಖುಷಿಯ ಸಂಗತಿ. ಕ್ರಿಕೆಟ್ ಒಳಗೊಂಡಂತೆ 5 ನೂತನ ಕ್ರೀಡೆಗಳನ್ನು ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಲಾಗಿದೆ. ಕ್ರಿಕೆಟ್ ಟಿ20 ಮಾದರಿಯಲ್ಲಿ ನಡೆಯಲಿದೆ.