Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಾಸಿಕ್: ಅನಧಿಕೃತ ದರ್ಗಾದ ತೆರವು ಕಾರ್ಯಾಚರಣೆಗೆ ವಿರುದ್ಧವಾದ ಪ್ರತಿಭಟನೆ, ಪೊಲೀಸರ ಮೇಲೆ ದಾಳಿ

Spread the love

ನಾಸಿಕ್: ಅನಧಿಕೃತ ದರ್ಗಾದ ತೆರವು ಕಾರ್ಯಾಚರಣೆಯನ್ನು ವಿರೋಧಿಸಿದ ಉದ್ರಿಕ್ರರ ಗುಂಪು ನಗರದಲ್ಲಿ ಮಂಗಳವಾರ ರಾತ್ರಿ ಪೊಲೀಸರ ಮೇಲೆ ದಾಳಿ ನಡೆಸಿದೆ. 21 ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದು, ಪೊಲೀಸರ ಮೂರು ವಾಹನಗಳು ಜಖಂಗೊಂಡಿವೆ.

ಪ್ರತಿಭಟನಕಾರರ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಅಶ್ರುವಾಯು ಶೆಲ್ ಪ್ರಯೋಗಿಸಿದರು. ಪರಿಸ್ಥಿತಿ ಬುಧವಾರ ನಿಯಂತ್ರಣದಲ್ಲಿತ್ತು. ಈ ಸಂಬಂಧ 15 ಜನರನ್ನು ಬಂಧಿಸಿದ್ದು, 57 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ. ನಾಸಿಕ್ ನಗರಸಭೆಯ ಸಿಬ್ಬಂದಿ ಬುಧವಾರ ಬೆಳಿಗ್ಗೆ ಇಲ್ಲಿನ ಕಾತೆ ಗಲ್ಲಿ ಪ್ರದೇಶದಲ್ಲಿದ್ದ ಸತ್‌ಪೀ‌ರ್ ಬಾಬಾ ದರ್ಗಾ ತೆರವುಗೊಳಿಸಿದರು ಎಂದು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *