Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮದುವೆಯಾದ ನಾಲ್ಕು ತಿಂಗಳಲ್ಲಿ ಪತಿಯ ಕೊಲೆ: ಪ್ರಿಯಕರಕ್ಕಾಗಿ ಕ್ರೂರವಾಗಿ 36 ಬಾರಿ ಚಾಕು ಇರಿದ ಪತ್ನಿ

Spread the love

ಮಧ್ಯಪ್ರದೇಶ:ಮಧ್ಯಪ್ರದೇಶದ ಇಂದೋರ್‌ನಲ್ಲಿ ರಾಹುಲ್ ಎಂಬ ಯುವಕನ ಶವ ಪತ್ತೆಯಾಗಿದೆ. ಇತ್ತೀಚೆಗೆ ಮದುವೆಯಾಗಿದ್ದ ಆತನನ್ನು ಆತನ ಹೆಂಡತಿಯೇ ಕೊಲೆ ಮಾಡಿದ್ದಾಳೆ. ಆತನ ಮೇಲೆ 36 ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದ ಆಕೆ ನಂತರ ತನ್ನ ಗೆಳೆಯನಿಗೆ ಕರೆ ಮಾಡಿ ಆ ಹೆಣವನ್ನು ತೋರಿಸಿದ್ದಾಳೆ. ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿ ಈ ಘಟನೆ ನಡೆದಿದೆ. ನವವಿವಾಹಿತ ವಧು ಮದುವೆಯಾದ ಕೇವಲ 4 ತಿಂಗಳ ನಂತರ ತನ್ನ ಪತಿಯನ್ನು ಕ್ರೂರವಾಗಿ ಕೊಂದಿದ್ದಾಳೆ. ಅದಾದ ನಂತರ ಅವಳು ತನ್ನ ಗೆಳೆಯನಿಗೆ ವಿಡಿಯೋ ಕರೆ ಮಾಡಿ ಕೆಲಸ ಮುಗಿಯಿತು ಬೇಬಿ ಎಂದು ಹೇಳಿದ್ದಾಳೆ.

ಬುರ್ಹಾನ್​ಪುರ, ಏಪ್ರಿಲ್ 16: ಮಧ್ಯಪ್ರದೇಶದ (Madhya Pradesh) ಬುರ್ಹಾನ್‌ಪುರದಲ್ಲಿ ಪೊಲೀಸರು ರಾಹುಲ್ ಎಂಬ ಯುವಕನ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ. ರಾಹುಲ್‌ನನ್ನು ಬೇರೆ ಯಾರೋ ಕೊಲೆ ಮಾಡಿಲ್ಲ. ಆತನನ್ನು 4 ತಿಂಗಳ ಹಿಂದೆ ಮದುವೆಯಾಗಿದ್ದ ಅವನ ಅಪ್ರಾಪ್ತ ವಯಸ್ಸಿನ ಹೆಂಡತಿಯೇ ಕೊಲೆ ಮಾಡಿದ್ದಾಳೆ. ಆ ಯುವತಿಗೆ ಈಗಾಗಲೇ ಒಬ್ಬ ಪ್ರಿಯಕರನಿದ್ದ. ಪ್ರಿಯಕರನಿಗಾಗಿ ಪತ್ನಿಯೇ ಪತಿಯ ಮೇಲೆ 36 ಬಾರಿ ಹಲ್ಲೆ ನಡೆಸಿ ಕೊಂದಿದ್ದಾಳೆ.

ಏಪ್ರಿಲ್ 13ರಂದು ಇಂದೋರ್-ಇಚಾಪುರ್ ಹೆದ್ದಾರಿಯ ಬುರ್ಹಾನ್‌ಪುರ ಐಟಿಐ ಕಾಲೇಜು ಬಳಿಯ ಪೊದೆಗಳಲ್ಲಿ ಯುವಕನ ಶವ ಪತ್ತೆಯಾಗಿತ್ತು. ಈ ಘಟನೆಯನ್ನು ಬಹಿರಂಗಪಡಿಸಿದ ಪೊಲೀಸರು ಮೃತನ ಪತ್ನಿ, ಆಕೆಯ ಪ್ರಿಯಕರ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ. ಪೊದೆಗಳಲ್ಲಿ ಪತ್ತೆಯಾದ ಶವವನ್ನು ಶಹಪುರದ ನಿವಾಸಿ ರಾಮಚಂದ್ರ ಪಾಂಡೆ ಅವರ ಪುತ್ರ ರಾಹುಲ್ ಎಂದು ಗುರುತಿಸಲಾಗಿದೆ.

ಏಪ್ರಿಲ್ 12ರಂದು ರಾಹುಲ್ ತನ್ನ ಪತ್ನಿಯೊಂದಿಗೆ ಮನೆಯಿಂದ ಹೊರಟಿದ್ದ. ಆದರೆ ಏಪ್ರಿಲ್ 13ರಂದು ಆತನ ಶವ ಪತ್ತೆಯಾದಾಗ ಆತನ ಪತ್ನಿ ಕಾಣೆಯಾಗಿದ್ದಳು. ತನಿಖೆಯಲ್ಲಿ ರಾಹುಲ್‌ನನ್ನು ಆತನ ಪತ್ನಿ, ಆಕೆಯ ಪ್ರಿಯಕರ ಭರತ್ ಅಲಿಯಾಸ್ ಯುವರಾಜ್ ಪಾಟೀಲ್ ಮತ್ತು ಆತನ ಇಬ್ಬರು ಸಹಚರರು ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ರಾಹುಲ್ ದೇಹದ ಮೇಲೆ ಚಾಕುವಿನಿಂದ 36 ಬಾರಿ ಇರಿದಿದ್ದರು.


Spread the love
Share:

administrator

Leave a Reply

Your email address will not be published. Required fields are marked *