ಬೀದಿ ದೀಪ ದುರಂತ: ಲೈಟ್ ಸ್ವಿಚ್ ಆನ್ ಮಾಡುವ ವೇಳೆ ಕರೆಂಟ್ ಶಾಕ್‌ಗೆ ಶಿಕ್ಷಕ ಬಲಿ

ತುಮಕೂರು : ಮನೆ ಬಳಿಯ ಬೀದಿ ದೀಪ ಆರಿಸುವಾಗ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲಿ ಶಿಕ್ಷಕರೋರ್ವರು ಮೃತಪಟ್ಟ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಬ್ಯಾಡಗೆರೆ ಗ್ರಾಮದಲ್ಲಿ ನಡೆದಿದೆ.

ಬ್ಯಾಡಗೆರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಿಟ್ಟೂರು ಗ್ರಾಮದ ಲೋಕೇಶ್ ರಾವ್ (35) ಎಂಬುವವರು ಈ ಘೋರ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಲೈಟ್ ಆನ್ ಮತ್ತು ಆಫ್ ಮಾಡಲು ಬರೀ ವಾಯರ್ ಬಿಡಲಾಗಿದೆ. ಹೀಗಾಗಿ ಲೈಟ್ ಆಫ್ ಮಾಡುವಾಗ ವೈಯರ್ನಿಂದ ವಿದ್ಯುತ್ ಪ್ರವಹಿಸಿದೆ. ಸ್ವಿಚ್ ಬೋರ್ಡ್ ಹಾಕಿದ್ದರೆ ಲೋಕೇಶ್ ಇಂದು ಕರೆಂಟ್ ಶಾಕ್ ಗೆ ಸಾಯುತ್ತಿರಲಿಲ್ಲ ಎಂದು ಸ್ಥಳೀಯರು ಮತ್ತು ಕುಟುಂಬಸ್ಥರು ಬೆಸ್ಕಾಂ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.