ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ – ಜನಜೀವನ ಸ್ವಲ್ಪ ಅಸ್ತವ್ಯಸ್ತ

ಮಂಗಳೂರು: ಮಂಗಳೂರಿನಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಆಕಾಶ ಮೋಡದಿಂದ ಆವೃತಗೊಂಡು, ಶೀಘ್ರದಲ್ಲೇ ಭಾರಿ ಮಳೆ ಸುರಿಯತೊಡಗಿತು. ಬೆಳಿಗ್ಗೆ ಸುಮಾರು 7 ಗಂಟೆಯ ನಂತರ ಗಾಳಿ ಸಹಿತ ಗುಡುಗು-ಮಿಂಚಿನೊಂದಿಗೆ ಆರಂಭವಾದ ಮಳೆಯು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿದಿದೆ. ಇದು ನಗರದ ಹಲವು ಭಾಗಗಳಲ್ಲಿ ಅಸೌಕರ್ಯಗಳನ್ನುಂಟುಮಾಡಿದೆ. ಅಕಾಲಿಕ ಮಳೆಯಿಂದಾಗಿ ಕೆಲಸಕ್ಕೆ ಹೊರಡುವವರು ಹಾಗೂ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ತೀವ್ರ ಪರದಾಟ ಅನುಭವಿಸಿದ್ದಾರೆ.