ಶವಪೆಟ್ಟಿಗೆಯೊಂದಿಗೆ ಗುಂಡಿಗೆ ಬಿದ್ದ ಕುಟುಂಬ

ಫಿಲಡೆಲ್ಫಿಯಾ :ಐದಾರು ಮಂದಿ ಶವ ಪೆಟ್ಟಿಗೆ ಹಿಡಿದು ಮರದ ವೇದಿಕೆಯಂತಿದ್ದ ಸ್ಥಳಕ್ಕೆ ಬಂದಿದ್ದಾರೆ, ಕೂಡಲೇ ಆ ವೇದಿಕೆ ಕುಸಿದಿತ್ತು, ಅಲ್ಲಿ ಮುಂದಿರುವ ಗುಂಡಿಯಲ್ಲಿ ಎಲ್ಲರೂ ಬಿದ್ದಿದ್ದಾರೆ. ಹಲವು ಮಂದಿಗೆ ಕೈಕಾಲುಗಳು ಮುರಿದಿವೆ. ಸ್ಮಶಾನದಲ್ಲಿ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿರುವ ಬಗ್ಗೆ ಅವಿಲ್ಸ್ ಕುಟುಂಬವು ಕೋಪ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿತು.