ಪುತ್ತೂರಿನಲ್ಲಿ ತಲ್ವಾರ್ ಹಿಡಿದ ಯುವಕರ ವಿರುದ್ಧ ಸುಮೊಟೋ ಕೇಸ್

ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ತಲ್ವಾರ್ ಹಿಡಿದ ಪೋಟೋ ವೈರಲ್ ಆದ ಬೆನ್ನಲ್ಲೇ ಇಬ್ಬರು ಯುವಕರಪ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸರು ಸುಮೊಟೋ ಕೇಸ್ ದಾಖಲಿಸಿದ್ದಾರೆ.
ಯುವಕರನ್ನು ಪುತ್ತೂರಿನ ಸುಜಿತ್ ಸಂಟ್ಯಾರು, ಪುಟ್ಟಣ್ಣ ಮರಿಕೆ ಎಂದು ಗುರುತಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಪೋಟೋ ವೈರಲ್ ಆದ ಬೆನ್ನಲ್ಲೇ ಯುವಕರ ವಿರುದ್ಧ ಸುಮೊಟೋ ಕೇಸ್ ನ್ನು ಪುತ್ತೂರು ಗ್ರಾಮಾಂತರ ಪೋಲೀಸರು ದಾಖಲಿಸಿದ್ದಾರೆ.