Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗರ್ಭಿಣಿಯಾಗಿದ್ದು ಪತಿಯನ್ನು ತುಂಡು ಮಾಡಿದಳೇ ಮಹಿಳೆ?

Spread the love

ಮೀರತ್: ಕೆಲವು ದಿನಗಳ ಹಿಂದೆ ಮೀರತ್​​ನಲ್ಲಿ ನಡೆದ ನೌಕಾಪಡೆಯ ಮಾಜಿ ಅಧಿಕಾರಿ ಸೌರಭ್ ರಜಪೂತ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 27 ವರ್ಷದ ಯುವಕನನ್ನು ಆತನ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಭೀಕರವಾಗಿ ಕೊಂದಿದ್ದರು. ಬಳಿಕ ಪ್ಲಾಸ್ಟಿಕ್ ಡ್ರಮ್​ನಲ್ಲಿ ಆತನ ದೇಹದ ತುಂಡುಗಳನ್ನು ಹಾಕಿ, ಅದರ ಮೇಲೆ ಸಿಮೆಂಟ್ ಹಾಕಿ ಮಚ್ಚಿಟ್ಟಿದ್ದರು. ಪೊಲೀಸ್ ತನಿಖೆಯ ಪ್ರಕಾರ, ಮುಸ್ಕಾನ್ ಮತ್ತು ಸಾಹಿಲ್ ಒಟ್ಟಾಗಿ ಕೊಲೆಗೆ ಸಂಚು ರೂಪಿಸಿದ್ದರು. ಮುಸ್ಕಾನ್ ಈ ಅಪರಾಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪತಿಗೆ ಮಾದಕ ದ್ರವ್ಯ ನೀಡಿದ ನಂತರ ಆಕೆ ತನ್ನ ಪ್ರಿಯಕರನೊಂದಿಗೆ ಆತನ ದೇಹವನ್ನು ಕತ್ತರಿಸಿ ಡ್ರಮ್‌ನಲ್ಲಿ ಇರಿಸಿ, ಸಾಕ್ಷ್ಯವನ್ನು ಮರೆಮಾಚುವ ಪ್ರಯತ್ನದಲ್ಲಿ ಸಿಮೆಂಟ್ ತುಂಬಿಸಿದರು. ಆದರೆ, ಈ ವೇಳೆ ಆಕೆ ಗರ್ಭಿಣಿಯಾಗಿದ್ದರು ಎಂಬ ಆಘಾತಕಾರಿ ವಿಷಯ ಇಂದು ಬೆಳಕಿಗೆ ಬಂದಿದೆ.

ಮೀರತ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಸ್ಕಾನ್ ರಸ್ತೋಗಿ ಅವರನ್ನು ಇಂದು ಗರ್ಭಧಾರಣೆಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷಾ ಫಲಿತಾಂಶಗಳು ಪಾಸಿಟಿವ್ ಬಂದಿದ್ದು, ಆಕೆ ಗರ್ಭಿಣಿ ಎಂದು ದೃಢಪಟ್ಟಿದೆ. ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಅವರನ್ನು ಮಾರ್ಚ್ 19ರಿಂದ ಚೌಧರಿ ಚರಣ್ ಸಿಂಗ್ ಜಿಲ್ಲಾ ಜೈಲಿನಲ್ಲಿ ಇರಿಸಲಾಗಿದೆ. ಗರ್ಭಿಣಿಯಾಗಿದ್ದಾಗಲೇ ಆಕೆ ತನ್ನ ಗಂಡನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ವಿಕೃತಿ ಮೆರೆದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *