Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕುಂದಾಪುರದಲ್ಲಿ ಗದ್ದೆ ಬೆಂಕಿ ನಂದಿಸಲು ಯತ್ನಿಸಿದ ರೈತ ಬೆಂಕಿಗಾಹುತಿಯಾದ ದಾರುಣ ಘಟನೆ

Spread the love

ಕುಂದಾಪುರ : ಕೃಷಿ ಗದ್ದೆಯಲ್ಲಿನ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ನಂದಿಸಲು ಹೋಗಿದ್ದ ವೇಳೆ ಬೆಂಕಿ ತಗುಲಿ ರೈತರೊಬ್ಬ ಸಜೀವದಹನಗೊಂಡ ಘಟನೆ ಕುಂದಾಪುರ ತಾಲೂಕಿನ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.ಮೃತರನ್ನು ಕಾಳಾವರ ನಿವಾಸಿ ಮಹಾಲಿಂಗ ದೇವಾಡಿಗ (80) ಎಂದು ಗುರುತಿಸಲಾಗಿದೆ. ಇವರು ಕೃಷಿ ಉದ್ದೇಶಕ್ಕಾಗಿ ತಮ್ಮ ಗದ್ದೆಯಲ್ಲಿ ಮಗಳು ಬೇಬಿಯೊಂದಿಗೆ ಕೃಷಿ ತ್ಯಾಜ್ಯ(ಸುಡುಮಣ್ಣು)ಕ್ಕೆ ಬೆಂಕಿ ಹಾಕಿದ್ದರು. ಈ ವೇಳೆ ಬೆಂಕಿಯ ಕೆನ್ನಾಲಿಗೆ ಸುತ್ತಮುತ್ತ ಆವರಿಸಿದ್ದು, ಇದರಿಂದ ಕೂಡಲೇ ಎಚ್ಚೆತ್ತ ಬೇಬಿ ಅಲ್ಲಿಗೆ ತೆರಳಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದರು. ಆದರೆ ಮಹಾಲಿಂಗ ದೇವಾಡಿಗ ಅವರು ಬೆಂಕಿಯ ಮಧ್ಯೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕೂಡಲೇ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಲಾಯಿತು. ಆದರೆ ಅಗ್ನಿಶಾಮಕದಳದ ವಾಹನ ಸ್ಥಳಕ್ಕೆ ಬರಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಹಿನ್ನೆಲೆ ಕಾರ್ಯಾಚರಣೆಗೆ ತೊಡಕಾಗಿತ್ತು. ಇದರಿಂದ ರೈತ ಸಜೀವ ದಹನವಾಗಿದ್ದಾರೆ. ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *