ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ – ಪತ್ನಿಯ ಕಣ್ಮುಂದೆ ಪತಿಯ ಆಕಸ್ಮಿಕ ಮರಣ

ಉತ್ತರ ಪ್ರದೇಶ : ಉತ್ತರ ಪ್ರದೇಶದ ಬರೇಲಿಯಲ್ಲಿ 25ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಪತ್ನಿಯೊಂದಿಗೆ ನೃತ್ಯ ಮಾಡುತ್ತಿರುವಾಗ ಹಠಾತ್ ಹೃದಯಾಘಾತದಿಂದ ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ. ವೇದಿಕೆಯಲ್ಲಿ ಪತ್ನಿಯ ಜೊತೆ ನೃತ್ಯ ಮಾಡುತ್ತಿದ್ದ ವೇಳೆ ಅವರು ಅಚಾನಕ್ ನೆಲಕ್ಕೆ ಕುಸಿದಿದ್ದಾರೆ. ಈ ದೃಶ್ಯ ಕಂಡ ಅತಿಥಿಗಳು ಬೆಚ್ಚಿಬಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ಅವರು ಆಗಲೇ ಕೊನೆಯುಸಿರೆಳೆದಿದ್ದರು. ವೈದ್ಯರ ಪ್ರಕಾರ ಇದು ಹೃದಯಾಘಾತದಿಂದಾಗಿ ಸಂಭವಿಸಿದೆ. ಈ ಘಟನೆ ಸಂಬಂಧಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೃತರನ್ನು ವಾಸಿಮ್ ಸರ್ವತ್ ಎಂದು ಗುರುತಿಸಲಾಗಿದೆ.