RBI ದಂಡ ಮತ್ತು ಡಾಕ್ಟರೇಟ್ ವಿವಾದದ ನಡುವೆ ಪತ್ರಕರ್ತರಿಗೆ ಮೇಲೆ ಸಿಡಿದ ರಾಜೇಂದ್ರ ಪ್ರಸಾದ್

ಮಂಗಳೂರು: ಗೌರವ ಡಾಕ್ಟರೇಟ್ ಪಡೆದ ಬಗ್ಗೆ ವಿವಾದ ಎದುರಿಸುತ್ತಿರುವ SCDCC ಬ್ಯಾಂಕ್ ಅಧ್ಯಕ್ಷ ದೃಶ್ಯ ಮಾಧ್ಯಮ ದಲ್ಲಿ ಸುದ್ದಿ ಪ್ರಸಾರ ಮಾಡದಕ್ಕೆ ಪ್ರೆಸ್ ಮೀಟ್ ನಲ್ಲಿ ಮಾಧ್ಯಮ ದ ವಿರುದ್ದ ಹರಿಹಾಯ್ದ SCDCC ಬ್ಯಾಂಕ್ ನ ಅಧ್ಯಕ್ಷ ರಾಜೇಂದ್ರ ಕುಮಾರ್.

“ಒಂರು ಸಣ್ಣ ಸುದ್ದಿಯೂ ನಿಮ್ಮ ಚಾನಲ್ ನಲ್ಲಿ ಬರುವುದಿಲ್ಲ, ಮತ್ತೆ ಎಂತಕ್ಕೆ ನೀವು ಬರುವುದು ನನ್ನ ಪಟ ತೆಗೀಲಿಕ್ಕ ? ಅದಕ್ಕೆ ನನ್ನಲ್ಲಿ ಜನ ಉಂಟು, ನೀವು ಬರಬೇಕಿಲ್ಲ. ದಿನ ಪತ್ರಿಕೆಗಳು ಮಾತ್ರ ಪತ್ರಿಕಾಗೋಷ್ಟಿಗೆ ಬಂರು ವರದಿ ಮಾಡುತ್ತಾರೆ. ಅವರು ಸಾಕು ನನಗೆ. ಯಾವತ್ತಾದರು ನನ್ನ ಒಂರು ಸುದ್ದಿ ನಿಮ್ಮ ಚಾನಲ್ ಗಳಲ್ಲಿ ಬಂದಿದೆಯಾ ? ಮತ್ತೆ ಯಾಕೆ ಈ ದೊಣ್ಣೆ (ಮೈಕ್) ನನ್ನ ಮುಂದೆ ಇಡುವುದು. ನನ್ನನ್ನು ಖುಷಿ ಪಡಿಸಲಿಕ್ಕಾ ! ತೆಗೆದುಕೊಂಡು ಹೋಗಿ ಎಂದು ಸಿಡಿದೆದ್ದಾರೆ.
ಹೀಗೆ, ಮಂಗಳೂರಿನ ದೊಡ್ಡ ಧಣಿ ರಾಜೇಂದ್ರ ಕುಮಾರ್ ಪತ್ರಿಕಾಗೋಷ್ಟಿಗೆ ಆಗಮಿಸಿದ ಟಿ ವಿ ಚಾನಲ್ ಗಳ ಪ್ರತಿನಿಧಿಗಳ ವಿರುದ್ದ ಹರಿಹಾಯ್ದಿದ್ದಾರೆ. ಯಾರೊಬ್ಬರೂ ಧಣಿಯ ಈ ” ಗುಡುಗಿಗೆ” ಪ್ರತಿಕ್ರಿಯೆ ನೀಡಿಲ್ಲ. ಅಂದ ಹಾಗೆ ದೊಡ್ಡ ಧಣಿ ರಾಜೇಂದ್ರ ಕುಮಾರ್ ಅವರಿಗೆ ಮೊನ್ನೆ ತಾನೆ ಮಂಗಳೂರು ವಿ ವಿ ಗೌರವ ಡಾಕ್ಟರೇಟ್ ಪದವಿ ಪ್ರಧಾನಿಸಿದೆ.
ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಮಂಗಳೂರಿನ ಪತ್ರಕರ್ತರ ಸಂಘ ಏನಾದರೂ ಪ್ರತಿಕ್ರಿಯೆ ನೀಡುತ್ತದಾ ಎಂಬುದು ಕುತೂಹಲಕ್ಕೆ ಗ್ರಾಸವಾಗಿದೆ. ಬಹುಶಃ ಪ್ರಭಾವಶಾಲಿ ವ್ಯಕ್ತಿಗಳ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸುವ ನಿರ್ಧಾರ ತೆಗೆದುಕೊಳ್ಳುವುದೋ ಅಥವಾ ಮೌನ ಸಹಮತ ವ್ಯಕ್ತಪಡಿಸುತ್ತದೋ ಎಂಬುದು ಎದುರಿನ ಪ್ರಶ್ನೆಯಾಗಿದೆ.
ತನ್ನ ಸಾಧನೆಗಳನ್ನು ಹೇಳಿಕೊಂಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ SCDCC ಬ್ಯಾಂಕ್ ಅಧ್ಯಕ್ಷರ ಸಾಧನೆಗೆ RBI ಕೂಡಾ ಪ್ರಶಂಸೆ ವ್ಯಕ್ತಪಡಿಸಿದೆ. ಬ್ಯಾಂಕಿಂಗ್ ಕಾಯ್ದೆಯ ಉಲ್ಲಂಘನೆಗೆ 5 ಲಕ್ಷ ದಂಡ ವಿಧಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಚ್ 26, 2025ರಂದು ಹೊರಡಿಸಿದ ಆದೇಶದ ಮೂಲಕ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ (The South Canara District Central Co-operative Bank Ltd.), ಕರ್ನಾಟಕದ ಮೇಲೆ ₹5.00 ಲಕ್ಷದ ದಂಡವನ್ನು ವಿಧಿಸಿದೆ. ಈ ದಂಡವನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 (Banking Regulation Act, 1949) ನ ಪ್ರಸ್ತಾಪಿತ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಿಧಿಸಲಾಗಿದೆ.
RBI ದಂಡ ವಿಧಿಸಲು ಕಾರಣಗಳು..?
RBI ನ ಪ್ರಕಾರ, ಈ ಬ್ಯಾಂಕ್ ನಿಯಮಿತ ನಿಯಮಗಳನ್ನು ಮೀರಿ ತನ್ನ ನಿರ್ದೇಶಕರಿಗೆ ಸಂಬಂಧಿಸಿದ ಸಾಲಗಳನ್ನು ಮಂಜೂರು ಮಾಡಿದೆ. ಈ ಪ್ರಕ್ರಿಯೆಯು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ರ ಸೆಕ್ಷನ್ 20 ಮತ್ತು 56ನ ನಿಯಮಗಳನ್ನು ಉಲ್ಲಂಘಿಸುತ್ತದೆ. ಹೀಗಾಗಿ RBI ಸೆಕ್ಷನ್ 47A(1)(c), 46(4)(i), ಮತ್ತು 56 ಅನುಸಾರ ಈ ದಂಡವನ್ನು ವಿಧಿಸಿದೆ.
ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ (NABARD) ಮಾರ್ಚ್ 31, 2023 ರಂದು ಈ ಬ್ಯಾಂಕಿನ ಹಣಕಾಸು ಸ್ಥಿತಿಯ ಪರಿಶೀಲನೆ ನಡೆಸಿತು. ಈ ಪರಿಶೀಲನೆಯ ಸಂದರ್ಭದಲ್ಲಿ ನಿಯಮ ಉಲ್ಲಂಘನೆಯ ಬಗ್ಗೆ ಸಾಕ್ಷ್ಯಗಳು ಲಭಿಸಿದವು. ಬ್ಯಾಂಕ್ ನ ಪ್ರತಿಕ್ರಿಯೆಗಳನ್ನು ಪರಿಶೀಲಿಸಿದ ನಂತರ RBI ಬ್ಯಾಂಕ್ ನ ಮೇಲೆ ದಂಡ ವಿಧಿಸುವ ನಿರ್ಧಾರಕ್ಕೆ ಬಂದಿದೆ RBI ಈ ದಂಡ ಹೊರತುಪಡಿಸಿ, ಬ್ಯಾಂಕ್ ಮೇಲಿನ ಇತರ ಕಾನೂನು ಕ್ರಮಗಳಿಗೂ ಅವಕಾಶ ಇರುತ್ತದೆ. ಬ್ಯಾಂಕ್ ನಿಯಮಾನುಸಾರ ಕೆಲಸ ಮಾಡದೇ ಇದ್ದರೆ, RBI ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು.
ಬ್ಯಾಂಕ್ ತನ್ನ ನಿರ್ದೇಶಕರಿಗೆ ಸಂಬಂಧಿತ ಸಾಲಗಳನ್ನು ನೀಡಿದ ಕಾರಣ ಇದು ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದೆ. NABARD ನ ಪರಿಶೀಲನೆಯ ಆಧಾರದ ಮೇಲೆ RBI ಈ ಕ್ರಮ ಕೈಗೊಂಡಿದೆ.