ನವಮಂಗಳೂರು ಬಂದರು ದೇಶದ ದ್ವಿತೀಯ ಅತ್ಯುತ್ತಮ ಕಂಟೈನರ್ ನಿರ್ವಹಣಾ ಬಂದರು

ಪಣಂಬೂರು: ನವಮಂಗಳೂರು ಬಂದರು ಕಂಟೈನರ್ ನಿರ್ವಹಣೆ ಯಲ್ಲಿ ದೇಶದ 2ನೇ ಅತ್ಯುತ್ತಮ ಬಂದರು ಎಂಬ ಕೀರ್ತಿಗೆ ಭಾಜನವಾಗಿದ್ದು, ಕೇಂದ್ರ ಸರಕಾರದ ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯವು ಪ್ರಶಸ್ತಿ ಪ್ರದಾನಿಸಿದೆ.

ಎನ್ಎಂಪಿಎ ಚೇರ್ಮನ್ ಡಾ. ಎ.ವಿ ರಮಣ, ನವ ಮಂಗಳೂರು ಬಂದರು, 2024-25ನೇ ಸಾಲಿನಲ್ಲಿ 46.01 ಎಂಎಂಟಿ ಸರಕುಗಳನ್ನು ನಿರ್ವ ಹಿಸಿ ಹೊಸ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
ಅತ್ಯುತ್ತಮ ಮೂಲ ಸೌಕರ್ಯವನ್ನು ಒದಗಿಸುವ ಮೂಲಕ ದೇಶದ ಮುಖ್ಯ ಬಂದ ರುಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ ಎಂದರು.
ಸರಕು ಸಾಗಣೆಯಲ್ಲಿ ಬಂದರು ಪ್ರಗತಿಯನ್ನು ಕಂಡಿದೆ. ಹಿಂದಿನ ಸಾಲಿನಲ್ಲಿ 45.7 ಎಂಎಂಟಿಯ ಸಾಧನೆ ಯನ್ನೂ ಮೀರಿ ಬೆಳೆಯುತ್ತಿದ್ದು ಒಟ್ಟು 600 ಕೋಟಿ ಲಾಭವನ್ನು ಗಳಿಸಿದೆ. 2047ರ ಹೊತ್ತಿಗೆ ಬಂದರು 100 ಎಂಎಂಟಿ ಕಾರ್ಗೊ ನಿರ್ವಹಣೆಯ ಗುರಿಯನ್ನು ಹೊಂದಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.