ಬೆಳ್ತಂಗಡಿ ಕಾಡಿನಲ್ಲಿ ಶಿಶು ಪತ್ತೆಯಾದ ಪ್ರಕರಣ: ತಂದೆ ರಂಜಿತ್ ಗೌಡ ಪೊಲೀಸರ ವಶಕ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬೆಳಾಲು ಗ್ರಾಮದ ಕೊಡೋಳುಕೆರೆ-ಮುಂಡ್ಕೊಟ್ಟು ರಸ್ತೆಯ ಬಳಿ ಈಚೆಗೆ ಪತ್ತೆಯಾದ 3 ತಿಂಗಳ ಹೆಣ್ಣು ಶಿಶುವಿನ ತಂದೆ ರಂಜಿತ್ ಗೌಡ ಎಂದು ತಿಳಿದುಬಂದಿದ್ದು,ಕಾಡಿನಲ್ಲಿ ಶಿಶು ಪತ್ತೆಯಾದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದೀಗ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಶಿಶುವನ್ನು ಪುತ್ತೂರಿನ ನೆಲ್ಲಿಕಟ್ಟೆಯ ರಾಮಕೃಷ್ಣ ಸೇವಾ ಸಮಾಜದ ವಾತ್ಸಲ್ಯಧಾಮ ಮಕ್ಕಳ ದತ್ತು ಕೇಂದ್ರಕ್ಕೆ ಆರೈಕೆಗಾಗಿ ದಾಖಲಿಸಲಾಗಿದೆ.
ಮಗುವಿನ ಹೆತ್ತವರನ್ನು ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು ತಂದೆ ರಂಜಿತ್ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.