Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೊಲಂಬೊ ಟೆಸ್ಟ್: ಲಂಕಾ ವಿರುದ್ಧ ಮಿಂಚಿದ ಎಡಗೈ ಸ್ಪಿನ್ನರ್ ಮಾನವ್ ಸುತಾರ್; ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದು ಭಾರತದ ಮೇಲುಗೈ!

Spread the love

ಕೊಲಂಬೊ : ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಭರವಸೆಯ ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾದ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಮೇಲುಗೈ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ, ಪಂದ್ಯದಲ್ಲಿ ಅತಿ ಹೆಚ್ಚು ಬಿಗ್-ಟರ್ನ್ ಎಸೆತಗಳನ್ನು ದಾಖಲಿಸಿದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 462 ರನ್ ಗಳಿಸಿದರೆ, ಶ್ರೀಲಂಕಾ ತಂಡವನ್ನು 284 ರನ್‌ಗಳಿಗೆ ಆಲೌಟ್ ಮಾಡಿತು. ಶ್ರೀಲಂಕಾದ ಇನಿಂಗ್ಸ್‌ನಲ್ಲಿ ಸುತಾರ್ 76 ರನ್ ನೀಡಿ 4 ವಿಕೆಟ್ ಕಬಳಿಸಿ ಗಮನ ಸೆಳೆದರು.

ಪಂದ್ಯದಲ್ಲಿ ಅತಿ ಹೆಚ್ಚು ಬಿಗ್-ಟರ್ನ್ ಎಸೆತಗಳನ್ನು ದಾಖಲಿಸಿದ ಬೌಲರ್‌ಗಳ ಪಟ್ಟಿಯಲ್ಲೂ ಸುತಾರ್ ಅಗ್ರಸ್ಥಾನದಲ್ಲಿದ್ದಾರೆ. ಅವರ 74% ಎಸೆತಗಳು 4.5 ಡಿಗ್ರಿಗಿಂತ ಹೆಚ್ಚು ತಿರುವು ಪಡೆದಿದ್ದು, ಇದು ಪಂದ್ಯದಲ್ಲಿದ್ದ ಎಲ್ಲ ಸ್ಪಿನ್ನರ್‌ಳಿಗಿಂತ ಉತ್ತಮ ಸಾಧನೆಯಾಗಿದೆ.
ಕೇಶರ ನುವಾಂತ 60.4% ರೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ರವೀಂದ್ರ ಜಡೇಜಾ 58.2%, ಕುಲದೀಪ್ ಯಾದವ್ 50%, ಸೋನಲ್ ದಿನುಷ 33.3%, ಪ್ರಭಾತ್ ಜಯಸೂರ್ಯ 22.2% ಹಾಗೂ ಧನಂಜಯ ಡಿ ಸಿಲ್ವಾ 12.5% ಬಿಗ್-ಟರ್ನ್ ಎಸೆತಗಳನ್ನು ದಾಖಲಿಸಿದ್ದಾರೆ.

ಮೊದಲ ಎಸೆತದಲ್ಲೇ ವಿಕೆಟ್
ಸುತಾರ್ ತಮ್ಮ ಪಂದ್ಯದ ಮೊದಲ ಎಸೆತದಲ್ಲೇ ಅನುಭವಿ ಬ್ಯಾಟರ್ ದಿನೇಶ್ ಚಾಂಡಿಮಾಲ್ ಅವರ ವಿಕೆಟ್ ಪಡೆದು ಗಮನ ಸೆಳೆದರು. ಇದಕ್ಕೂ ಮೊದಲು ಅಫ್ಘಾನಿಸ್ತಾನ ವಿರುದ್ಧದ ತಮ್ಮ ಚೊಚ್ಚಲ ಪಂದ್ಯದಲ್ಲೂ ಮೊದಲ ಓವರ್‌ನಲ್ಲೇ ವಿಕೆಟ್ ಕಬಳಿಸಿ ಮಿಂಚಿದ್ದರು.
“ಮೊದಲ ಎಸೆತದಲ್ಲೇ ವಿಕೆಟ್ ಪಡೆದಿದ್ದು ತುಂಬಾ ಸಂತೋಷ ನೀಡಿತು. ಇದು ಇಡೀ ಪಂದ್ಯದುದ್ದಕ್ಕೂ ಅಪಾರ ಆತ್ಮವಿಶ್ವಾಸವನ್ನು ನೀಡುತ್ತದೆ” ಎಂದು ದಿನದಾಟದ ಬಳಿಕ ಸುತಾರ್ ಹೇಳಿದರು.
ಸುತಾರ್‌ಗೆ ನೆರವಾದ ಸೆಂಟರ್ ಆಫ್ ಎಕ್ಸಲೆನ್ಸ್ (CoE) ತರಬೇತಿ

ಗಾಲೆಯಲ್ಲಿ ಸುತಾ‌ರ್ ಅವರ ಈ ಅದ್ಭುತ ಪ್ರದರ್ಶನಕ್ಕೆ ಸರಣಿಗೂ ಮುನ್ನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪಡೆದ 10 ದಿನಗಳ ತರಬೇತಿ ಪ್ರಮುಖವಾಗಿ ನೆರವಾಯಿತು.
ಶ್ರೀಲಂಕಾದ ಗಾಲೆ ಮೈದಾನದ ಪರಿಸ್ಥಿತಿಗೆ ಹೊಂದಿಕೊಳ್ಳುವ ಉದ್ದೇಶದಿಂದ, ಗಾಳಿಯ ವಾತಾವರಣದಲ್ಲಿ ಕೂಕಬುರ್ರಾ ಚೆಂಡುಗಳೊಂದಿಗೆ ತೆರೆದ ಮೈದಾನದಲ್ಲಿ ಅವರು ಅಭ್ಯಾಸ ನಡೆಸಿದ್ದರು. ಜೊತೆಗೆ, ತರಬೇತುದಾರರು ಅವರ ಬೌಲಿಂಗ್ ಕ್ರೀಸ್ ಅಪ್ರೋಚ್ ಮೇಲೂ ವಿಶೇಷವಾಗಿ ಕೆಲಸ ಮಾಡಿದ್ದರು.
ಈ ತರಬೇತಿಯಿಂದ ಶ್ರೀಲಂಕಾದ ಪರಿಸ್ಥಿತಿಗಳಿಗೆ ವೇಗವಾಗಿ ಹೊಂದಿಕೊಳ್ಳಲು ಸಾಧ್ಯವಾಯಿತು ಎಂದು ಸುತಾರ್ ಹೇಳಿದ್ದಾರೆ.
“ಉತ್ತಮ ಜಾಗದಲ್ಲಿ ಸರಿಯಾದ ಲೆಂಗ್ ಮತ್ತು ಸರಿಯಾದ ವೇಗದಲ್ಲಿ ಬೌಲಿಂಗ್ ಮಾಡುವುದು. ಏಕೆಂದರೆ ಇಲ್ಲಿನ ಪಿಚ್‌ನಲ್ಲಿ ಬೌನ್ಸ್ ಕೂಡ ಇದ್ದು, ಸರಿಯಾದ ಲೈನ್‌ನಲ್ಲಿ ಬೌಲಿಂಗ್ ಮಾಡುವುದು ಅನಿವಾರ್ಯವಾಗಿತ್ತು” ಎಂದು ದಿನದಾಟದ ನಂತರದ ಸುದ್ದಿಗೋಷ್ಠಿಯಲ್ಲಿ ಸುತಾರ್ ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *