Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುಗಾದಿ ಹಬ್ಬಕ್ಕೆ ಹೂಹಣ್ಣು ಬೆಲೆ ಏರಿಕೆಯ ಶಾಕ್ – ಗ್ರಾಹಕರು ಕಂಗಾಲು

Spread the love

ಭಾನುವಾರ ಯುಗಾದಿ (Ugadi) ಹಬ್ಬ, ಹಿಂದೂ ಪಂಚಾಂಗದ ಪ್ರಕಾರ ಹೊಸವರ್ಷದ ಆರಂಭವಾಗಿದೆ. ರಾಜ್ಯದ ಜನರು ಯುಗಾದಿ ಹಬ್ಬವನ್ನ ಪ್ರತಿವರ್ಷ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದಾರೆ. ಹಬ್ಬ ಅಂದ್ರೆ ಮಾರುಕಟ್ಟೆ (Market) ಜನ ಜಂಗಳಿಯಿಂದ ತುಂಬಿ ಹೋಗುತ್ತೆ. ಹೂ, ಹಣ್ಣುಗಳ ಖರೀದಿ ಭರಾಟೆ ಕೂಡ ಜೋರಾಗಿರುತ್ತದೆ.ಜೊತೆಗೆ ಹಣ್ಣು, ಹೂವು (Flower), ತರಕಾರಿ ಬೆಲೆ ಕೂಡ ಗಗನಕ್ಕೇರಿದೆ. ಯಾವ ಹೂವಿನ ಬೆಲೆ ಎಷ್ಟಿದೆ.

ಮಾರ್ಕೆಟ್ನಲ್ಲಿ ಜನವೋ ಜನ!

ಜನರು ಮಾರ್ಕೆಟ್ ನಲ್ಲಿ ಮುಗಿಬಿದ್ದು ಹೂವು, ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಯುಗಾದಿ ಹಬ್ಬಕ್ಕೆ ಹೂವಿನ ಬೆಲೆ ಗಗನಕ್ಕೇರಿದೆ. ಹೂವಿನ ಬೆಲೆಗಳನ್ನ ಕೇಳಿ ಗ್ರಾಹಕರು ಕಂಗಾಲಾಗಿದ್ದಾರೆ. ಬೆಲೆ ಎಷ್ಟೇ ಆದ್ರೂ ಹಬ್ಬಕ್ಕಾಗಿ ಮಾರ್ಕೆಟ್ ನಲ್ಲಿ ಜನ ಹೂವು, ಹಣ್ಣು ಖರೀದಿ ಮಾಡ್ತಿದ್ದಾರೆ.

ಯಾವ ಹೂವಿನ ಬೆಲೆ ಎಷ್ಟಿದೆ?

ಕನಕಾಂಬರ ಮಾರು 600ರೂ, ಸೇವಂತಿ ಮಾರು 300ರೂ, ಮಲ್ಲಿಗೆ ಹೂವಿನ ಒಂದು ದಿಂಡಿಗೆ 200ರೂ, ಮಾವಿನ ಎಲೆ, ಬೇವಿನ ಎಲೆ ಒಂದು ಕಟ್ಟು 25-30 ರೂಪಾಯಿ ಇದೆ. ಹಬ್ಬದ ಹಿನ್ನೆಲೆ ಹೂವು, ಹಣ್ಣಿನ ಬೆಲೆ ಡಬಲ್ ಆಗಿದೆ ಅಂತ ಗ್ರಾಹಕರು ಕಂಗಾಲು.

ಫುಲ್ ಜಾಮ್ ಜಾಮ್

ಯುಗಾದಿ ಮತ್ತು ರಂಜಾನ್ ಹಬ್ಬ ಒಂದರ ಹಿಂದೆ ಒಂದು ಬಂದ ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಊರುಗಳತ್ತ ತೆರಳಿದ್ದಾರೆ. ಸಾಲು ಸಾಲು ರಜೆಗಳಿದ್ದು, ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯೇ ಫುಲ್ ಜಾಮ್ ಆಗಿತ್ತು.

ಜನರು ಬಸ್ಸು, ಹಾಗೂ ತಮ್ಮ ತಮ್ಮ ವಾಹನಗಳಲ್ಲಿ ಊರುಗಳಿಗೆ ತೆರಳುತ್ತಿದ್ದಾರೆ. ಇದ್ರಿಂದ ಗೋವರ್ಧನ್ ಥಿಯೇಟರ್, ಗೊರಗುಂಟೆಪಾಳ್ಯ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳು ಸಾಲುಗಟ್ಟಿ ನಿಂತಿತ್ತು, ಸವಾರರು ಪರದಾಡುವಂತಾಯ್ತು. ಇಂದು ಕೂಡ ಫುಲ್ ಜಾಮ್ ಆಗುವ ಸಾಧ್ಯತೆ ಇದೆ.


Spread the love
Share:

administrator

Leave a Reply

Your email address will not be published. Required fields are marked *