Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೋಲಾರ: ವರದಕ್ಷಿಣೆಗಾಗಿ ಹೆಂಡತಿಯ ತಲೆಗೆ ಕುಕ್ಕರ್‌ನಿಂದ ಹೊಡೆದು ಭೀಕರ ಹ*ತ್ಯೆ ಮಾಡಿದ ಪಾಪಿ ಪತಿ

Spread the love

ಕೋಲಾರ: ಮದುವೆಯಾಗಿ 5 ವರ್ಷವಾಗಿದ್ದರೂ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯೋರ್ವ ತನ್ನ ಪತ್ನಿಯನ್ನೇ ಕುಕ್ಕರ್ ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಕೋಲಾರದ ಹಸಾಳ ಗ್ರಾಮದಲ್ಲಿ ನಡೆದಿದೆ.

ಆರೋಪಿ ಪತಿ ಮಂಜುನಾಥ್ 24 ವರ್ಷದ ಸಹನಾಳನ್ನು ಹತ್ಯೆ ಮಾಡಿದ್ದಾನೆ. ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದು ಮದುವೆಯಾದಾಗಿನಿಂದ ಪದೇ ಪದೇ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು. ನಿನ್ನೆ ಸಹನಾ ತನ್ನ ತಾಯಿ ಜಯಮ್ಮಗೆ ವಿಡಿಯೋ ಕಾಲ್ ಮಾಡಿ ತನ್ನ ಪತಿ ಹೊಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಇನ್ನು ತಡರಾತ್ರಿ ಪತಿ ಮಂಜುನಾಥ್ ಪತ್ನಿ ತಲೆಗೆ ಕುಕ್ಕರ್ ನಿಂದ ಹೊಡೆದು ಹತ್ಯೆ ಮಾಡಿ ನಂತರ ನೇಣು ಬಿಗಿದಿದ್ದಾನೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *