Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜೈಪುರ: ರಾಜಸ್ಥಾನದಲ್ಲಿ ಭೀಕರ ಮಕ್ಕಳ ಕಳ್ಳಸಾಗಣೆ ಜಾಲ ಪತ್ತೆ; 15 ಬಾಲಕಿಯರ ರಕ್ಷಣೆ, 11 ಆರೋಪಿಗಳು ಅರೆಸ್ಟ್

Spread the love

ಜೈಪುರ: ರಾಜಸ್ಥಾನದ ಝಾಲಾವರ್‌ನಲ್ಲಿ ಮಕ್ಕಳ ಕಳ್ಳಸಾಗಣೆ ಜಾಲವೊಂದನ್ನು ಪೊಲೀಸರು ಭೇದಿಸಿದ್ದು, 15 ಬಾಲಕಿಯರನ್ನು ರಕ್ಷಿಸಿದ್ದಾರೆ ಹಾಗೂ ಮುಂಬೈನ ಮೂವರು ದಲ್ಲಾಳಿಗಳು ಸೇರಿದಂತೆ 11 ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ಶುಕ್ರವಾರ 10 ಬಾಲಕಿಯರನ್ನು ರಕ್ಷಿಸಲಾಗಿದ್ದು, ಕಳ್ಳಸಾಗಣೆಗೆ ಸಂಬಂಧಿಸಿದಂತೆ ದಲ್ಲಾಳಿಗಳ ನಡುವೆ ನಡೆದಿರುವ ಬ್ಯಾಂಕ್ ವಹಿವಾಟುಗಳನ್ನು ಪತ್ತೆಹಚ್ಚಲಾಗಿದೆ ಎಂದು ಝಾಲಾವರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ. “ಅವರ ಆಸ್ತಿ ಮತ್ತು ಬ್ಯಾಂಕ್ ವಿವರಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ಕುಮಾರ್ ತಿಳಿಸಿದರು.

ಪೊಲೀಸ್‌ ಕಾರ್ಯಾಚರಣೆಯ ಫಲವಾಗಿ, ಕಳ್ಳಸಾಗಣೆದಾರರು ಕೆಲವು ಬಾಲಕಿಯರನ್ನು ಅವರ ಕುಟುಂಬಗಳಿಗೆ ವಾಪಸ್ ಕಳುಹಿಸಿದ್ದಾರೆ ಎಂದು ಕುಮಾರ್ ಹೇಳಿದರು.
ಈ ಜಾಲವು ಮುಖ್ಯವಾಗಿ ಕಂಜರ್ ಸಮುದಾಯದ ಬಡ ಮತ್ತು ಸಾಲದ ಸುಳಿಗೆ ಸಿಲುಕಿದ ಕುಟುಂಬಗಳನ್ನು ಗುರಿಯಾಗಿಸಿಕೊಂಡಿತ್ತು. ಅವರ ಹೆಣ್ಣುಮಕ್ಕಳಿಗೆ ಕೆಲಸ ಮತ್ತು ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿ ಅವರನ್ನು ಕರೆದೊಯ್ಯಲಾಗುತಿತ್ತು ಎಂದು ಕುಮಾರ್ ಹೇಳಿದರು. “11 ವರ್ಷ ತುಂಬುವವರೆಗೆ ಮಕ್ಕಳನ್ನು ಈ ಜಾಲವು ತನ್ನ ವಶದಲ್ಲಿಟ್ಟುಕೊಂಡು, ಬಳಿಕ ಮುಂಬೈನಂತಹ ನಗರಗಳಲ್ಲಿ ವೇಶ್ಯಾವಾಟಿಕೆಗಾಗಿ ಮಾರಾಟ ಮಾಡುತ್ತಿತ್ತು. ರಕ್ಷಿಸಲ್ಪಟ್ಟ ಬಹುತೇಕ ಬಾಲಕಿಯರು ನಾಲ್ಕರಿಂದ ಐದು ವರ್ಷ ವಯಸ್ಸಿನವರಾಗಿದ್ದಾರೆ” ಎಂದು ಅವರು ಹೇಳಿದರು.
ಕಳ್ಳಸಾಗಣೆಯಿಂದ ಬಂದ ಹಣದ ಹೆಚ್ಚಿನ ಪಾಲನ್ನು ದಲ್ಲಾಳಿಗಳೇ ಇಟ್ಟುಕೊಳ್ಳುತ್ತಿದ್ದರು ಹಾಗೂ ಕೇವಲ ಸಣ್ಣ ಭಾಗವನ್ನು ಬಾಲಕಿಯರ ಕುಟುಂಬಗಳಿಗೆ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *