Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮನೆಗೆ ಹೋಗಿ ವಿಸಿಲ್ ಹೊಡೆಯಿರಿ’!: ಚೆಪಾಕ್‌ನಲ್ಲಿ ಚೆನ್ನೈ ಫ್ಯಾನ್ಸ್‌ಗೆ ಸನ್ನೆ ಮಾಡಿ ಗೇಲಿ ಮಾಡಿದ ಇಶಾನ್ ಕಿಶನ್

Spread the love

ಚೆನ್ನೈ: Ishan Kishan Trolls CSK Fans ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಕನಸಿಗೆ ಸನ್‌ರೈಸರ್ಸ್ ಹೈದರಾಬಾದ್ ಕೊಳ್ಳಿ ಇಟ್ಟಿದೆ. ಇದರ ಬೆನ್ನಲ್ಲೇ, ಹೈದರಾಬಾದ್ ಆಟಗಾರ ಇಶಾನ್ ಕಿಶನ್, ಚೆನ್ನೈ ಫ್ಯಾನ್ಸ್‌ಗೆ ಮಾಡಿದ ಒಂದು ಸನ್ನೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಹೈದರಾಬಾದ್ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.ಚೆನ್ನೈ ನೀಡಿದ್ದ 181 ರನ್‌ಗಳ ಗುರಿಯನ್ನು ಹೈದರಾಬಾದ್ ತಂಡ ಒಂದು ಓವರ್ ಬಾಕಿ ಇರುವಂತೆಯೇ ಬೆನ್ನಟ್ಟಿತು. ಈ ಗೆಲುವಿನೊಂದಿಗೆ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಅಧಿಕೃತವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದಿವೆ.
ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ 70 ರನ್ ಸಿಡಿಸಿ ಹೈದರಾಬಾದ್ ಪರ ಟಾಪ್ ಸ್ಕೋರರ್ ಎನಿಸಿದ ಇಶಾನ್ ಕಿಶನ್, ಪಂದ್ಯದ ಹೀರೋ ಆದರು. ಪಂದ್ಯ ಗೆದ್ದ ನಂತರ ಗ್ಯಾಲರಿಯಲ್ಲಿದ್ದ ಸಿಎಸ್‌ಕೆ ಅಭಿಮಾನಿಗಳತ್ತ ‘ವಿಸಿಲ್ ಪೋಡು’ ಎಂದು ಸನ್ನೆ ಮಾಡಿದ ಇಶಾನ್, ನಂತರ ಸ್ಟೇಡಿಯಂನಿಂದ ಹೊರಹೋಗುವ ದಾರಿ ತೋರಿಸಿ, ‘ಇನ್ನು ಮನೆಗೆ ಹೋಗಿ ವಿಸಿಲ್ ಹೊಡೆಯಿರಿ’ ಎಂದು ಸನ್ನೆ ಮೂಲಕ ಗೇಲಿ ಮಾಡಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಋತುರಾಜ್ ಗಾಯಕ್ವಾಡ್ (21 ಎಸೆತಗಳಲ್ಲಿ 15 ರನ್, ಒಂದೂ ಬೌಂಡರಿ ಇಲ್ಲ) ಒತ್ತಡದಲ್ಲಿ ಆಡಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್ 27 ಎಸೆತಗಳಲ್ಲಿ 44 ರನ್ ಚಚ್ಚಿ ತಂಡದ ಮೊತ್ತವನ್ನು 180/7ಕ್ಕೆ ತಲುಪಿಸಿದರು. ಹೈದರಾಬಾದ್ ಪರ ನಾಯಕ ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದರು.
181 ರನ್‌ಗಳ ಗುರಿ ಬೆನ್ನಟ್ಟಿದ ಹೈದರಾಬಾದ್‌ಗೆ ಚೆನ್ನೈ ಬೌಲರ್‌ಗಳು ಆರಂಭದಲ್ಲಿ ಒತ್ತಡ ಹೇರಿದರು. ಆದರೆ, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ (26 ಎಸೆತಗಳಲ್ಲಿ 47 ರನ್) ಜೊತೆಗೂಡಿದ ನಂತರ ಪಂದ್ಯದ ಚಿತ್ರಣವೇ ಬದಲಾಯಿತು. ಇವರಿಬ್ಬರ 75 ರನ್‌ಗಳ ಸ್ಫೋಟಕ ಜೊತೆಯಾಟ ಸಿಎಸ್‌ಕೆ ಕೈಯಿಂದ ಪಂದ್ಯವನ್ನು ಕಸಿದುಕೊಂಡಿತು.
ಈ ಸೋಲಿನೊಂದಿಗೆ 12 ಅಂಕ ಹೊಂದಿರುವ ಚೆನ್ನೈ ತಂಡದ ಪ್ಲೇಆಫ್ ಹಾದಿ ಕಠಿಣವಾಗಿದೆ. ಇನ್ನು ಚೆನ್ನೈ ಪ್ಲೇಆಫ್‌ಗೆ ಹೋಗಬೇಕಾದರೆ, ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ದೊಡ್ಡ ಅಂತರದಲ್ಲಿ ಗೆಲ್ಲಬೇಕು. ಜೊತೆಗೆ ಬೇರೆ ತಂಡಗಳ ಫಲಿತಾಂಶವನ್ನೂ ಅವಲಂಬಿಸಬೇಕಾಗಿದೆ.
ಒಂದು ಸ್ಥಾನಕ್ಕಾಗಿ ಐದು ತಂಡಗಳ ನಡುವೆ ಪೈಪೋಟಿ:
19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದರೆ, ಸಿಎಸ್‌ಕೆ ಎದುರು ಗೆಲುವು ಸಾಧಿಸುತ್ತಿದ್ದಂತೆಯೇ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ಕೂಡಾ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿವೆ. ಇದೀಗ ಇನ್ನುಳಿದ 1 ಸ್ಥಾನಕ್ಕೆ ಇತರ 5 ತಂಡಗಳ ನಡುವೆ ಸ್ಪರ್ಧೆಯಿವೆ. ಮುಂಬೈ ಇಂಡಿಯನ್ಸ್, ಲಖನೌ ಸೂಪರ್ ಜೈಂಟ್ಸ್‌ ತಂಡಗಳು ಈಗಾಗಲೇ ರೇಸ್‌ನಿಂದ ಹೊರಬಿದ್ದಿವೆ. ಉಳಿದಂತೆ ಪಂಜಾಬ್‌ ಕಿಂಗ್ಸ್‌, ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ರೇಸ್‌ನಲ್ಲಿ ಉಳಿದುಕೊಂಡಿವೆ.
ಪಂಜಾಬ್‌ 13 ಪಂದ್ಯದಲ್ಲಿ 13 ಅಂಕ, ರಾಜಸ್ಥಾನ 12 ಪಂದ್ಯದಲ್ಲಿ 12 ಅಂಕ, ಚೆನ್ನೈ 13 ಪಂದ್ಯದಲ್ಲಿ 12 ಅಂಕ, ಡೆಲ್ಲಿ 13 ಪಂದ್ಯದಲ್ಲಿ 12 ಅಂಕ, ಕೋಲ್ಕತಾ 12 ಪಂದ್ಯದಲ್ಲಿ 11 ಅಂಕ ಗಳಿಸಿವೆ. ಈ ಪೈಕಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮಾತ್ರ ಗರಿಷ್ಠ 16 ಅಂಕ ಗಳಿಸುವ ಅವಕಾಶವಿದ್ದು, ಪಂಜಾಬ್‌ ಕಿಂಗ್ಸ್‌, ಕೋಲ್ಕತಾಗೆ ತಲಾ 15, ಚೆನ್ನೈ, ಡೆಲ್ಲಿಗೆ ತಲಾ 14 ಅಂಕ ಗಳಿಸಬಹುದು.


Spread the love
Share:

administrator

Leave a Reply

Your email address will not be published. Required fields are marked *