Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರೀ ಮಳೆಗೆ ವಿಮಾನ ಲ್ಯಾಂಡಿಂಗ್ ವ್ಯತ್ಯಯ; ಆಗಸದಲ್ಲೇ ಸುತ್ತಾಡಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್

Spread the love

ಮಂಗಳೂರು : ಗುರುವಾರ ಸಂಜೆ ಕರಾವಳಿಯುದ್ದಕ್ಕೂ ಸುರಿದ ಗುಡುಗು ಸಹಿತ ಭಾರೀ ಮಳೆಯ ಪರಿಣಾಮ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಇಳಿಯುವಿಕೆಯಲ್ಲಿ ವ್ಯತ್ಯಯ ಉಂಟಾಯಿತು. ಸುರಕ್ಷಿತ ಲ್ಯಾಂಡಿಂಗ್‌ಗಾಗಿ ವಿಮಾನಗಳು ಆಗಸದಲ್ಲೇ ಹಲವು ಸುತ್ತು ಸುತ್ತಾಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.

ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನವು ಸಂಜೆ ಲ್ಯಾಂಡಿಂಗ್‌ಗೆ ಪ್ರಯತ್ನಿಸಿತಾದರೂ, ದಟ್ಟ ಮೋಡ ಮತ್ತು ಮಳೆಯ ಕಾರಣದಿಂದ ಸಾಧ್ಯವಾಗಲಿಲ್ಲ. ಇದರಿಂದಾಗಿ ವಿಮಾನವು ಮೂಡಬಿದಿರೆ, ಬೆಳ್ತಂಗಡಿ, ಬಂಟ್ವಾಳ ಮತ್ತು ವಿಟ್ಲ ಭಾಗಗಳ ಆಗಸದಲ್ಲಿ ‘ಹೋಲ್ಡಿಂಗ್ ಪ್ಯಾಟರ್ನ್‌’ನಲ್ಲಿ ದೀರ್ಘಕಾಲ ಸುತ್ತಾಡಿತು.

ಕಡಿಮೆ ಎತ್ತರದಲ್ಲಿ ವಿಮಾನವು ಪದೇ ಪದೇ ಸುತ್ತುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಾಂತ್ರಿಕ ದೋಷವಿರಬಹುದು ಎಂದು ಶಂಕಿಸಿ ಗಾಬರಿಗೊಂಡರು. ವಿಟ್ಲ ಸುತ್ತಮುತ್ತ ವಿಮಾನ ಸುತ್ತುತ್ತಿರುವ ದೃಶ್ಯ ‘ಫ್ಲೈಟ್ ರಾಡಾರ್’ ಆ್ಯಪ್‌ನಲ್ಲಿಯೂ ಕಂಡುಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಂತಿಮವಾಗಿ ಹವಾಮಾನ ಸುಧಾರಿಸಿದ ನಂತರ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು. ಒಟ್ಟು ಎರಡು ವಿಮಾನಗಳು ಈ ರೀತಿ ತೊಂದರೆ ಅನುಭವಿಸಿದ್ದು, ಸದ್ಯ ಅಪಾಯವಿಲ್ಲದೆ ಲ್ಯಾಂಡ್ ಆಗಿವೆ ಎಂದು ನಿಲ್ದಾಣದ ಮೂಲಗಳು ಸ್ಪಷ್ಟಪಡಿಸಿವೆ.


Spread the love
Share:

administrator

Leave a Reply

Your email address will not be published. Required fields are marked *