‘ಹಿಜಾಬ್‌ಗೆ ಅವಕಾಶ ನೀಡಿದರೆ ಕೇಸರಿ ಶಾಲಿಗೂ ಅನುಮತಿ ಕೊಡಿ’: ಸರ್ಕಾರ ಹಾಗೂ ಬಿಜೆಪಿ ವಿರುದ್ಧ ರಾಜೇಶ್ ಪವಿತ್ರನ್ ಕಿಡಿ!

ರಾಜ್ಯ ಸರ್ಕಾರ ಹಿಜಾಬ್ ಗೆ ಅನುಮತಿ ನೀಡಿರುವುದನ್ನು ಸ್ಯಾಫ್ರನ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಪವಿತ್ರನ್ ಆಕ್ರೋಶ ವ್ಯಕ್ತ ಪಡಿಸಿದರು.

ಮತೀಯ ಒತ್ತಡಕ್ಕೆ ಮಣಿದು ಅಥವಾ ಅಲ್ಪಸಂಖ್ಯಾತರ ತುಷ್ಟೀಕರಣದ ಭಾಗವಾಗಿಯೂ ಇಂತಹ ತೀರ್ಮಾನ ಕೈಗೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ… ಅದರಿಂದ ಸರ್ಕಾರ ಬಹುಸಂಖ್ಯಾತರ ಭಾವನೆಗೆ ನೋವುಂಟು ಮಾಡುವ ಇಂತಹ ಆದೇಶ ವಾಪಸು ತೆಗೆದುಕೊಳ್ಳಬೇಕು ಇಲ್ಲವಾದರೆ ಶಾಲಾ ಕಾಲೇಜುಗಳಲ್ಲಿ ಕೇಸರಿ ಶಾಲಿಗೂ ಅನುಮತಿ ಕೊಡಬೇಕು ಎಂದು ಆಗ್ರಹಿಸಿದರು…
ಇದೇ ಸಂದರ್ಭದಲ್ಲಿ ಬಿಜೆಪಿಯ ಆಕ್ರೋಶವನ್ನು ನಾಟಕದ ಕಂಪನಿ ಎಂದು ಜರಿದಿರುವ ಅವರು ಈ ಹಿಂದೆ ಹಿಜಾಬ್ ವಿಚಾರದಲ್ಲಿ ಗಲಾಟೆ ಮಾಡಿದ ಅನ್ಯ ಮತದ 6 ಹೆಣ್ಣುಮಕ್ಕಳ ಮೇಲೆ.. ತಮ್ಮ ಸರ್ಕಾರವಿದ್ದರೂ ಕ್ರಮ ಏಕೆ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.. ಇದು ಬಿಜೆಪಿಯ ನಕಲಿ ಹಿಂದುತ್ವಕ್ಕೆ ಹಿಡಿದ ಕೈಗನ್ನಡಿ ಆದ್ದರಿಂದ ಹಿಂದುತ್ವದ ವಿಚಾರದಲ್ಲಿ ಮಾತಾಡಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ ಎಂದು ವ್ಯಾಖ್ಯಾನಿಸಿದರು.