ಯುಎಇ ಮೇಲೆ ಕ್ಷಿಪಣಿ, ಡ್ರೋನ್ ದಾಳಿ: ವಾಯುಪಡೆಯಿಂದ ಸಮರ್ಥ ಪ್ರತ್ಯುತ್ತರ

ಅಬುಧಾಬಿ: ಇರಾನ್ – ಅಮೆರಿಕ ನಡುವಿನ ಕದನ ವಿರಾಮ ಅಸ್ಥಿರವಾಗಿರುವ ಬೆನ್ನಲ್ಲೇ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೇಲೆ ಕ್ಷಿಪಣಿ ಹಾಗೂ ಡೋನ್ ದಾಳಿ ನಡೆದಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.
ದೇಶದ ವಾಯು ರಕ್ಷಣಾ ಪಡೆಗಳು ಕ್ಷಿಪಣಿ ಮತ್ತು ಡೋನ್ ದಾಳಿಯನ್ನು ತಡೆಯುವ ಕಾರ್ಯದಲ್ಲಿ ‘ಸಕ್ರಿಯವಾಗಿ ತೊಡಗಿಕೊಂಡಿವೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಭದ್ರತಾ ಪರಿಸ್ಥಿತಿಯನ್ನು ನಿಗಾದಲ್ಲಿಟ್ಟುಕೊಂಡು ಅಗತ್ಯ ಪ್ರತಿರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದೇಶದ ಭದ್ರತಾ ವ್ಯವಸ್ಥೆಯನ್ನು ಎಚ್ಚರಿಕೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಲಾಗಿದೆ. ನಾಗರಿಕರು ಸುರಕ್ಷತಾ ಮುನ್ನೆಚ್ಚರಿಕೆ ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
