ನ್ಯಾಯಾಲಯದಲ್ಲೇ ಮಹಿಳೆಯ ಹೈಡ್ರಾಮಾ; ಕುತ್ತಿಗೆಗೆ ಚಾಕು ಹಿಡಿದು ಸಾವಿನ ಚೀರಾಟ!

ಈಗಿನ ದಿನಗಳಲ್ಲಿ ನ್ಯಾಯ ಎಲ್ಲಿದೆ ಎಂದು ಹುಡುಕುತ್ತ ಹೋಗಬೇಕು. ಏಕೆಂದರೆ ಆಡಳಿತ ವರ್ಗದಲ್ಲಿ ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಭ್ರಷ್ಟಾಚಾರ ಎನ್ನುವುದು ವ್ಯಾಘ್ರನಾಗಿ ಘರ್ಜಿಸುತ್ತಿದೆ. ನ್ಯಾಯ ಕೇಳಿಕೊಂಡು ನ್ಯಾಯಾಲಯಕ್ಕೆ ಹೋದರೆ, ಅಲ್ಲಿನೂ ಭಷ್ಟರೇ ಎದುರಾದ್ರೆ ಯಾರು ಏನು ಮಾಡೋಕೆ ಆಗುತ್ತೆ. ಓದು ಇತರರಿಗೆ ಮಾದರಿಯಾಗಬೇಕು ಎನ್ನುವುದು ಮಾತು ಇತ್ತು. ಆದ್ರೆ ಈಗ ಅದೇ ಓದು ಎನ್ನುವುದು ಭ್ರಷ್ಟಾಚಾರದ ಕುಣಿಕೆಗೆ ಸಿಕ್ಕಿಕೊಳ್ಳುತ್ತಿದೆ. ಈಗ ಇದೆಲ್ಲ ಯಾಕೆ ಎಂದರೆ, ನ್ಯಾಯಾಲಯ, ನ್ಯಾಯಾಧೀಶರು, ವಕೀಲರು ಮುಂದೆಯೇ ಮಹಿಳೆಯೊಬ್ಬರು ಸಾವಿನ ಕೂಗು ಕೂಗಿದ್ದಾರೆ. ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅಕ್ಕಯ್ಯಪಾಲಂ ನಿವಾಸಿಯಾದ ಲಕ್ಷ್ಮಿ (Lakshmi) ಎನ್ನುವರು ಕುತ್ತಿಗೆಗೆ ಚಾಕು ಹಿಡಿದುಕೊಂಡು ನಾನು ಸತ್ತು ಹೋಗುತ್ತೇನೆ. ನನಗೆ ನ್ಯಾಯ ಬೇಕು ಎಂದು ಕೋರ್ಟ್ನಲ್ಲೇ ನ್ಯಾಯಾಧೀಶರ ಮುಂದೆಯೇ ಕಿರುಚಾಡಿದ್ದಾರೆ. ಈ ವೇಳೆ ಸುತ್ತ ವಕೀಲರು, ಪೊಲೀಸರು, ಸಿಬ್ಬಂದಿ, ಸಾರ್ವಜನಿಕರು ಇದ್ದರೂ ಎಲ್ಲರೂ ಸುಮ್ಮನೆ ಇದ್ದರು. ಮಹಿಳೆ ಆ ರೀತಿ ವರ್ತನೆ ಮಾಡೋದಕ್ಕೆ ಕಾರಣ ಇರಬೇಕಲ್ಲ. ಆ ಕಾರಣ ಏನು ಎಂಬುದು ಮಾಹಿತಿ ಇಲ್ಲಿದೆ.

ವಕೀಲ ಸತ್ಯನಾರಾಯಣ್ ಅವರು ಪ್ರಕರಣ ಸಂಬಂಧ ಮಹಿಳೆಯಿಂದ ಸಾಕಷ್ಟು ಹಣ ಪಡೆದುಕೊಂಡಿದ್ದಾರಂತೆ. ಹಣ ಪಡೆದುಕೊಂಡರೂ ವಕೀಲ ಯಾವುದೇ ಕೆಲಸ ಮಾಡಿಕೊಟ್ಟಿಲ್ಲ. ಇದರಿಂದ ಬೇಸತ್ತಿದ್ದ ಮಹಿಳೆ ವಕೀಲರ ಬಳಿ ಸಾಕಷ್ಟು ಬಾರಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆದರೆ ವಕೀಲರಿಂದ ಯಾವುದೇ ಸರಿಯಾದ ಉತ್ತರ ಅಥವಾ ಕೆಲಸ ಮಾಡಿ ಕೊಡುವ ಮಾತುಗಳು ಕೇಳಿ ಬಂದಿಲ್ಲ. ಇದರಿಂದ ರೊಚ್ಚಿಗೆದ್ದ ಮಹಿಳೆ ನೇರ ವಿಶಾಖಪಟ್ಟಣಂ ಜಿಲ್ಲೆಯ ಕೋರ್ಟ್ಗೆ ಹೋಗಿ ಕತ್ತಿಗೆಗೆ ಚಾಕು ಹಿಡಿದುಕೊಂಡು ರಂಪಾಟ ಮಾಡಿದ್ದಾರೆ. ನನಗೆ ನ್ಯಾಯ ಬೇಕು ಎಂದು ಜೋರು ಜೋರಾಗಿ ಕಿರುಚಿದ್ದಾರೆ.ವಿಡಿಯೋದಲ್ಲಿ ಸಾವಿನ ಕೂಗು ಕೂಗುತ್ತಿರುವ ಮಹಿಳೆ ನಾನು ಸತ್ತು ಹೋಗುತ್ತೇನೆ. ಅವನನ್ನ ಇಲ್ಲಿಗೆ ಕರೆಯುತ್ತಿರೋ ಇಲ್ವೋ ಎಂದು ಕೂಗಾಡಿದ್ದಾರೆ. ಕೋರ್ಟ್ನಲ್ಲೇ ಇಂತಹ ಘಟನೆ ನಡೆದಿರುವುದು ಒಂದು ರೀತಿಯಲ್ಲಿ ನಮ್ಮ ಸಮಾಜಕ್ಕೆ ಅವಮಾನ ಎಂತಲೇ ಹೇಳಬಹುದು. ಏಕೆಂದರೆ ನ್ಯಾಯ ಬೇಕು ಎಂದು ವಕೀಲರು, ನ್ಯಾಯಾಲಯಕ್ಕೆ ಅಂತ ಹೋದರೆ, ಹಣ ಹಿಸ್ಕೊಂಡು ಮೋಸ ಮಾಡಿದರೆ, ಒಂದು ರೀತಿಯಲ್ಲಿ ಬೇಲಿಯೇ ಇದ್ದು ಹೊಲ ಮೇಯಿದಂತೆ ಆಗುತ್ತದೆ.