ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬಿರು ಬಿಸಿಲಿನ ಕಾಟ! ವಿದ್ಯಾರ್ಥಿಗಳ ಕಾಳಜಿಗೆ ಓ ಆರ್ ಎಸ್ ವಿತರಣೆ

ರಾಜ್ಯದ 8,96,447 ವಿದ್ಯಾರ್ಥಿಗಳು 2,818 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಬಿರುಬಿಸಿಲು ವಿದ್ಯಾರ್ಥಿಗಳಿಗೆ ಹೊಸ ಸವಾಲಾಗಿ ಪರಿಣಮಿಸಿದೆ. ಹಲವೆಡೆ ತಾಪಮಾನ 38°-42°C ದರ್ಜೆಗೆ ಏರಿದ್ದು, ಪರೀಕ್ಷೆ ಮತ್ತು ಹವಾಮಾನದ ಒತ್ತಡ ಒಟ್ಟಿಗೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ, ಗಾಳಿ, ಬೆಳಕು, ಫ್ಯಾನ್ಗಳ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖೆಯು ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ, ವಿದ್ಯಾರ್ಥಿಗಳ ಆರೋಗ್ಯದ ಮೇಲೂ ವಿಶೇಷ ಗಮನ ಹರಿಸಿದೆ. ಕುಡಿಯುವ ನೀರು, ವಿದ್ಯುತ್ ಸರಬರಾಜು, ತುರ್ತು ವೈದ್ಯಕೀಯ ಸಹಾಯವೂ ಲಭ್ಯವಿರಲಿದೆ.
ಈ ಬಾರಿಯ ಬಿಸಿಲು ಹೆಚ್ಚಾದ ಕಾರಣ, ವಿದ್ಯಾರ್ಥಿಗಳು ಹೆಚ್ಚಿನ ಜಾಗರೂಕತೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.