Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸ್ಯಾಫ್ರನ್ ಫ್ರಂಟ್ ಅಭಿಯಾನದ ಬೆನ್ನಲ್ಲೇ ಸಚಿವರ ಸ್ಪಂದನೆ

Spread the love

ಮಂಗಳೂರು ತಾಲೂಕಿನ ಬೈಕಂಪಾಡಿ ಮತ್ತು ಕುಳಾಯಿ ನಡುವಿನ ಐತಿಹಾಸಿಕ ಬಗ್ಗಂಡಿ ಕೆರೆಯನ್ನು ಹೂಳೆತ್ತಿ ಪುನಶ್ಚೇತನಗೊಳಿಸುವಂತೆ ಕೋರಿ ಸ್ಯಾಫ್ರನ್ ಫ್ರಂಟ್ ಸಲ್ಲಿಸಿದ ಮನವಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಸ್ಯಾಫ್ರನ್ ಫ್ರಂಟ್ ಹಮ್ಮಿಕೊಂಡಿದ್ದ ಬೃಹತ್ ಜನಜಾಗೃತಿ ಅಭಿಯಾನದಲ್ಲಿ ಕೆರೆ ಸಂರಕ್ಷಣೆ ಮತ್ತು ಕೃಷಿ ಭೂಮಿ ಉಳಿಸುವ ಬಗ್ಗೆ ಸಾರ್ವಜನಿಕರು ಧ್ವನಿ ಎತ್ತಿದ್ದರು. ಇದರ ಬೆನ್ನಲ್ಲೇ ಸಚಿವರು ಈ ಬಗ್ಗೆ ಆಸಕ್ತಿ ತೋರಿರುವುದು ಹೋರಾಟಕ್ಕೆ ಹೊಸ ಚೈತನ್ಯ ನೀಡಿದೆ.ಸ್ಯಾಫ್ರನ್ ಫ್ರಂಟ್ ಮುಖ್ಯಸ್ಥರಾದ ರಾಜೇಶ್ ಪವಿತ್ರನ್ ಅವರು ಸಚಿವರಿಗೆ ಪತ್ರ ಬರೆದು, ದಶಕಗಳಿಂದ ಹೂಳು ತುಂಬಿರುವ ಕೆರೆಯನ್ನು ಸ್ವಚ್ಛಗೊಳಿಸಿ ಜಲಮೂಲವನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದರು.

ಸಚಿವರ ಈ ಸ್ಪಂದನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಜೇಶ್ ಪವಿತ್ರನ್, ಇದು ಕೆರೆ ಉಳಿಸುವ ಹೋರಾಟಕ್ಕೆ ಸಿಕ್ಕ ಮಹತ್ವದ ಬೆಂಬಲವಾಗಿದೆ ಎಂದು ತಿಳಿಸಿದ್ದಾರೆ. ಕೃಷಿಕರ ಜೀವನಾಡಿಯಾಗಿರುವ ಬಗ್ಗಂಡಿ ಕೆರೆಯ ಹೂಳೆತ್ತುವ ಪ್ರಕ್ರಿಯೆ ಶೀಘ್ರ ಆರಂಭವಾಗುವ ನಿರೀಕ್ಷೆಯಿದೆ. ಇದರೊಂದಿಗೆ ಕೃಷಿ ಭೂಮಿಯನ್ನು ಮರಳಿ ಪಡೆಯುವ ಹಾಗೂ ಇಡೀ ಪ್ರದೇಶವನ್ನು ಹಸಿರೀಕರಣಗೊಳಿಸುವ ನಿಟ್ಟಿನಲ್ಲಿ ಸಾಫ್ರೋನ್ ಫ್ರಂಟ್ ತನ್ನ ಹೋರಾಟವನ್ನು ಮುಂದುವರಿಸಲಿದೆ.


Spread the love
Share:

administrator

Leave a Reply

Your email address will not be published. Required fields are marked *