Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಜೆಪಿಯಲ್ಲಿದೆ ವಾಶಿಂಗ್ ಮಷಿನ್: ಯಾರೇ ಬಂದರೂ ಅಲ್ಲಿ 24 ಕ್ಯಾರೆಟ್ ಗೋಲ್ಡ್ ಆಗುತ್ತಾರೆ; ಸಚಿವ ಸಂತೋಷ್ ಲಾಡ್ ವ್ಯಂಗ್ಯ

Spread the love

ಧಾರವಾಡ: ಆಪ್‌ ಸಂಸದರು ಬಿಜೆಪಿ ಸೇರ್ಪಡೆ ಆಗಿದ್ದು ಆಪರೇಷನ್‌ ಕಮಲವಲ್ಲ. ಯಾರು ಏನೇ ಕರ್ಮಕಾಂಡ ಮಾಡಿದರೂ ಬಿಜೆಪಿ ಸೇರಿದರೆ ಸಾಕು 24 ಕ್ಯಾರೆಟ್‌ ಗೋಲ್ಡ್‌ ಆಗುತ್ತಾರೆ. ಇದು ಬಿಜೆಪಿ ತಂತ್ರ. ವಿಶ್ವಗುರು ಇವರ ಬಳಿ ಇದ್ದಾಗ ಆಪ್‌ ಸಂಸದರು ಇವರಿಗೆ ಯಾಕೆ ಬೇಕಿತ್ತು?” ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಒಂದು ವಾಶಿಂಗ್‌ ಮಶಿನ್‌ ಇದ್ದು, ಯಾರು ಎಷ್ಟೇ ಭ್ರಷ್ಟರಿದ್ದರೂ ಅದರಲ್ಲಿ ಹಾಕಿದರೆ ಅವರು ಶುದ್ಧರಾಗಿ 24 ಕ್ಯಾರೆಟ್‌ ಚಿನ್ನವಾಗುತ್ತಾರೆ, ಇತ್ತೀಚೆಗೆ ಆಮ್‌ ಆದ್ಮಿ ಪಕ್ಷದ 7 ರಾಜ್ಯಸಭಾ ಸದಸ್ಯರು ಬಿಜೆಪಿಗೆ ಸೇರಿದಕ್ಕೆ ವ್ಯಂಗ್ಯವಾಡಿದ್ದಾರೆ.

ವಾಶಿಂಗ್‌ ಪೌಡರ್‌ ನಿರ್ಮಾ, ನಿಮ್ಮಪ್ಪ ಮಾಡಿದ ಕರ್ಮಾ ಎಂದು ನಾವು ಚಿಕ್ಕವರಿದ್ದಾಗ ವಾಶಿಂಗ್‌ ಪೌಡರ್‌ ಬಗ್ಗೆ ಬರುವ ಜಾಹೀರಾತನ್ನು ತಮಾಷೆ ಮಾಡುತ್ತಿದ್ದೆವು. ಆ ರೀತಿ ಯಾರೇ ಭ್ರಷ್ಟಾಚಾರ ಮಾಡಿದರೂ ಬಿಜೆಪಿಗೆ ಬಂದ ಮೇಲೆ ಅವರು ಶುದ್ಧವಾಗುತ್ತಾರೆ.

ರಾಘವ್‌ ಚಡ್ಡಾ ಬಿಜೆಪಿಗೆ ಏಕೆ ಬೇಕಿತ್ತು? ಪಂಜಾಬ್‌ನಲ್ಲಿ ಕಾಂಗ್ರೆಸ್‌ ಸರ್ಕಾರ ಬೀಳಿಸಲು ಈ ತಂತ್ರಗಾರಿಕೆ ಮಾಡಲಾಗಿದೆ ಎಂದು ಕಿಡಿಕಾರಿದರು.

ಇಷ್ಟು ದಿನ ಬಿಜೆಪಿಯನ್ನು ಬೈಯುತ್ತಿದ್ದ ರಾಘವ್‌ ಚಡ್ಡಾ, ಈಗ ಏಕಾಏಕಿ ಬಿಜೆಪಿಯಷ್ಟು ನೈತಿಕ ಮೌಲ್ಯವನ್ನು ಹೊಂದಿರುವ ಪಕ್ಷ ಬೇರೊಂದಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಹೇಳಿಕೆಗಳು ಮತ್ತು ಅವರ ಪಕ್ಷಾಂತರ ನಿರ್ಧಾರ ಅನುಕೂಲಸಿಂಧು ರಾಜಕಾರಣಕ್ಕೆ ಜ್ವಲಂತ ಉದಾಹರಣೆ” ಎಂದು ಸಂತೋಷ್‌ ಲಾಡ್‌ ಹೇಳಿದರು.

ಪಂಚ ರಾಜ್ಯಗಳ ಚುನಾವಣೆಯ ವಿಚಾರವಾಗಿ ಮಾತನಾಡಿ, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಯೊಂದಿಗೆ ನಾವು ಗೆಲ್ಲುತ್ತೇವೆ. ಕೇರಳದಲ್ಲಿ ಯುಡಿಎಫ್ ಮೈತ್ರಿ ಗೆಲ್ಲುತ್ತದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರಲಿದೆ. ಅಸ್ಸಾಂನಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *