ಮುಂಬೈ-ಸೋಲಾಪುರ ರೈಲಿನಲ್ಲಿ ತಾಂತ್ರಿಕ ದೋಷ: ಡೈಮಂಡ್ ಕ್ರಾಸಿಂಗ್‌ನಲ್ಲಿ ಹಳಿ ಬಿಟ್ಟ ಬೋಗಿ

ಪುಣೆ: ಮಹಾರಾಷ್ಟ್ರದ ಪುಣೆ ರೈಲು ನಿಲ್ದಾಣವನ್ನು ಪ್ರವೇಶಿಸುವಾಗ ವಂದೇ ಭಾರತ್ ಎಕ್ಸ್‌ಪ್ರೆಸ್‌ನ (Vande Bharat Express) ಒಂದು ಬೋಗಿ ಹಳಿ ತಪ್ಪಿತು. ಇಂದು ಸಂಜೆ 7.30ರ ಸುಮಾರಿಗೆ ನಿಲ್ದಾಣ ಪ್ರವೇಶಿಸುವಾಗ ರೈಲಿನ ನಾಲ್ಕನೇ ಬೋಗಿಯ ಒಂದು ಟ್ರಾಲಿ ಡೈಮಂಡ್ ಕ್ರಾಸಿಂಗ್‌ನಲ್ಲಿ ಹಳಿ ತಪ್ಪಿತು ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವು ಅಥವಾ ಗಾಯಗಳಾಗಿಲ್ಲ. ರೈಲು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಹೊರಟು ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗಬೇಕಿತ್ತು.
