ಭುವನೇಶ್ವರ: ಮಹಿಳಾ ಹಾಸ್ಟೆಲ್‌ಗೆ ನುಗ್ಗಿ ಎಂಬಿಎ ವಿದ್ಯಾರ್ಥಿನಿ ಮೇಲೆ ಅತ್ಯಾಚಾ*ರ; 67 ವರ್ಷದ ವೃದ್ಧನ ಬಂಧನ

ಭುವನೇಶ್ವರ: ಒಡಿಶಾ ರಾಜಧಾನಿಯ ವಿದ್ಯಾರ್ಥಿನಿಯರ ನಿಲಯಕ್ಕೆ ಪಕ್ಕದ ಕಿರಾಣಿ ಅಂಗಡಿಯ ಮಾಲೀಕನಾದ 67 ವರ್ಷದ ವೃದ್ಧನೊಬ್ಬ ನುಗ್ಗಿ ಎಂಬಿಎ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ವರದಿಯಾಗಿದೆ. ಆರೋಪಿ ದೀಪಕ್ ಪ್ರಧಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಗಂಗಾಪಾಡ ಪ್ರದೇಶದಲ್ಲಿ ಪ್ರಧಾನ್ ಕಿರಾಣಿ ಅಂಗಡಿ ನಡೆಸುತ್ತಿದ್ದ ಏಪ್ರಿಲ್ 24ರಂದು ಛತ್ತೀಸ್‌ಗಢದ ಬಿಲಾಸಪುರ ಮೂಲದ ಎಂಬಿಎ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆಪಾದಿಸಲಾಗಿದೆ. ಸಂತ್ರಸ್ತೆ ಇನ್ಫೋ ವ್ಯಾಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.
ಸಂತ್ರಸ್ತೆ ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಹೊರಗಿನ ವ್ಯಕ್ತಿ ಹೇಗೆ ಮಹಿಳಾ ಹಾಸ್ಟೆಲ್‌ಗೆ ಪ್ರವೇಶಿಸಿದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
