ಬೀದಿಯಲ್ಲಿ ವೀಲಿಂಗ್ ಅಬ್ಬರ- ಸಾರ್ವಜನಿಕರಿಗೆ ತೊಂದರೆ ನೀಡಿದ ದುಷ್ಕರ್ಮಿಗಳು

ಬೆಂಗಳೂರು: ಮಾ.17, 2025 – ಕುಂಬೇನ ಆಗ್ರಹಾರದಿಂದ ಕಾಡುಗೋಡಿಗೆ ಹೋಗುವ ರಸ್ತೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ದುಷ್ಪ್ರವೃತ್ತಿಯನ್ನು ಮೆರೆದ ಘಟನೆ ನಡೆದಿದೆ. ಮಧ್ಯಾಹ್ನ 1:45ಕ್ಕೆ ನಡೆದ ಈ ಘಟನೆಯಲ್ಲಿ, ಯಮಹ RX ಸೇರಿದಂತೆ ಹಲವು ದ್ವಿಚಕ್ರ ವಾಹನಗಳಲ್ಲಿ ಅಪಾಯಕಾರಿ ರೀತಿ ವೀಲಿಂಗ್ ಮಾಡಿ, ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ.

ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಸಿದ ಈ ಪುಂಡರು, ಅತ್ಯಂತ ವೇಗವಾಗಿ, ಅಸಭ್ಯವಾಗಿ ವಾಹನ ಚಲಾಯಿಸುವ ಮೂಲಕ ಸಾರ್ವಜನಿಕ ಸುರಕ್ಷತೆಯನ್ನೇ ಕದಡಿದ್ದಾರೆ. ಇವರು ಯಾವುದೇ ಕಾನೂನು ಭಯವಿಲ್ಲದೆ ಈ ಕೃತ್ಯ ಎಸಗಿರುವುದರಿಂದ, ಈ ರೀತಿಯ ಘಟನೆಗಳು ಮರುಕಳಿಸದಂತೆ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಈ ಘಟನೆ ಬೆಂಗಳೂರು ಮಹಾನಗರದ ಮಹಾದೇವಪುರ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ತಕ್ಷಣ ತನಿಖೆ ನಡೆಸಿ, ಅಪಾಯಕಾರಿಯಾಗಿ ವಾಹನ ಚಲಾಯಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಾಗರಿಕರು ಪೊಲೀಸರ ಗಮನ ಸೆಳೆದಿದ್ದಾರೆ. ವಾಹನಗಳ ಕರ್ಕಶ ಶಬ್ದ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುವ ಘಟನೆಗಳು ಹೆಚ್ಚಾಗಿದ್ದು, ತಕ್ಷಣವೇ ನಿಗ್ರಹಕ್ಕೆ ಮುನ್ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.