Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

180 ಮಕ್ಕಳ ಮೇಲೆ ದೌರ್ಜನ್ಯವೆಸಗಿದ್ದ ಕಾಮುಕನ ಹೆಡೆಮುರಿ ಕಟ್ಟಿದ ಪೊಲೀಸರು

Spread the love

ಅಮರಾವತಿ: ಮಹಾರಾಷ್ಟ್ರದ ಅಮರಾವತಿಯಲ್ಲಿ 180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಆಯಾಜ್ ಖಾನ್ ತನ್ವೀರ್‌ನನ್ನು ಪೊಲೀಸರು ಬಂಧಿಸಿ ನಗರದ ಬೀದಿಯಲ್ಲಿ ಮೆರವಣಿಗೆ ಮಾಡಿದ್ದು, ಈ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಏಪ್ರಿಲ್ 15ರಂದು ಆಯಾಜ್‌ ಖಾನ್‌ನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ 180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅವುಗಳನ್ನು ಚಿತ್ರೀಕರಿಸಿಕೊಂಡಿದ್ದು, ನಂತರ ಮಕ್ಕಳನ್ನು ಬ್ಲಾಕ್‌ಮೇಲ್ ಮಾಡುವುದಕ್ಕೆ ಈ ವೀಡಿಯೋಗಳನ್ನು ಬಳಸುತ್ತಿದ್ದನು. ಈತನ ಮೊಬೈಲ್‌ ಪೋನ್‌ಗಳಲ್ಲಿ 350ಕ್ಕೂ ಹೆಚ್ಚು ಬೇರೆ ಬೇರೆ ಅಪ್ರಾಪ್ತರ 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳು ಪತ್ತೆಯಾಗಿದ್ದವು. ಅಮರಾವತಿಯ ಪರತ್ವಾಡ ನಿವಾಸಿಯಾಗಿದ್ದ ಈತನನ್ನು ಮಹಾರಾಷ್ಟ್ರದ ರಾಜ್ಯಸಭಾ ಬಿಜೆಪಿ ಸಂಸದ ಅನಿಲ್ ಬೊಂಡೆ ಅವರು ನೀಡಿದ ದೂರಿನ ಮೇರೆಗೆ ಬಂಧಿಸಲಾಗಿತ್ತು.
ಆರೋಪಿ ತನ್ನ ಮೊಬೈಲ್ ಫೋನ್‌ನಲ್ಲಿದ್ದ ಅಶ್ಲೀಲ ವೀಡಿಯೋಗಳನ್ನು ಮಕ್ಕಳನ್ನು ಬ್ಲಾಕ್‌ಮೇಲ್ ಮಾಡುವುದಕ್ಕೆ ಹಾಗೂ ಅವರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ಎಳೆಯುವುದಕ್ಕೆ ಬಳಸುತ್ತಿದ್ದ ಎಂದು ವರದಿಯಾಗಿದೆ. ಇವುಗಳಲ್ಲಿ ಕೆಲ ವೀಡಿಯೋಗಳನ್ನು ಇಂಟರ್‌ನೆಟ್‌ನಲ್ಲಿ ವ್ಯಾಪಕವಾಗಿ ಹರಿಬಿಡಲಾಗಿತ್ತು. ವಾಟ್ಸಾಪ್ ಹಾಗೂ ಸ್ನ್ಯಾಪ್‌ಚಾಟ್ ಮೂಲಕ ಅಪ್ರಾಪ್ತರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲಾಗುತ್ತಿತ್ತು. ಈ ಸಂಬಂಧ ರಾಜ್ಯಸಭಾ ಸಂಸದ ಅನಿಲ್ ಬೊಂಡೆ ಅವರು ಅಮರಾವತಿಯ ಗ್ರಾಮೀಣ ಎಸ್‌ಪಿ ವಿಶಾಲ್ ಬೊಂಡೆ ಅವರಿಗೆ ಲಿಖಿತ ದೂರು ದಾಖಲಿಸಿದ್ದರು.
AIMIM ಸಂಘಟನೆಯ ಪದಾಧಿಕಾರಿಯಾಗಿದ್ದ ಅಯಾಜ್
ಆರೋಪಿ ಮೊಹಮ್ಮದ್ ಅಯಾಜ್ ಈ ಹಿಂದೆ AIMIM ಸಂಘಟನೆಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಂಬ ಆರೋಪ ಈತನ ಬಂಧನದ ವೇಳೆ ಕೇಳಿ ಬಂದಿದೆ. ಆತ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊಗಳು ಮತ್ತು ಫೋಟೋಗಳಲ್ಲಿ ಕಂಡು ಬರುವಂತೆ ಆತ ಅವರು AIMIMನ ಅಮರಾವತಿ ವಿಭಾಗದ ಅಧ್ಯಕ್ಷ ಹಾಜಿ ಇರ್ಫಾನ್ ಖಾನ್ ಅವರಿಂದ ಪತ್ರವನ್ನು ಸ್ವೀಕರಿಸುತ್ತಿರುವುದು ಹಾಗೂ ಪಕ್ಷದ ಸಮಾವೇಶಗಳಲ್ಲಿ ಭಾಗವಹಿಸುತ್ತಿದ್ದಂತ ಫೋಟೋ ವೀಡಿಯೋಗಳಿವೆ. ಆದರೆ, ಪ್ರಕರಣ ಬೆಳಕಿಗೆ ಬಂದ ನಂತರ ಅಂತಹ ಹಲವಾರು ವೀಡಿಯೊಗಳನ್ನು ಆತನ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಳಿಸಿ ಹಾಕಲಾಗಿದೆ ಎಂದು ವರದಿಯಾಗಿದೆ.
ಆದರೆ ಈಗ ಈತನನ್ನು ಮಹಾರಾಷ್ಟ್ರದ ಪೊಲೀಸರು ಬೀದಿಯಲ್ಲಿ ಮೆರವಣಿಗೆ ಮಾಡಿದ್ದು, ಇದರ ವೀಡಿಯೋ ವೈರಲ್ ಆಗಿದೆ. ಅನೇಕರು ಈ ವೀಡಿಯೋಗೆ ಕಾಮೆಂಟ್‌ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *