Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುವಕ-ಯುವತಿಯರ ಟಾರ್ಚರ್ ರ್ನೀಡುತ್ತಿದ್ದ ನಕಲಿ ಪೊಲೀಸ್ ನ ಬಂಧನ

Spread the love

ಬೆಂಗಳೂರು: ಪಾರ್ಕ್‌ಗಳಲ್ಲಿ ಕೂತುಕೊಂಡು ಮಾತನಾಡುತ್ತಿದ್ದ ಯುವಕ-ಯುವತಿಯರನ್ನು ಬೆದರಿಸಿ ಹಣ ಮತ್ತು ಚಿನ್ನದ ಆಭರಣ ದೋಚುತ್ತಿದ್ದ ನಕಲಿ ಪೊಲೀಸ್ ಆಸೀಫ್ ಬಂಧನಕ್ಕೆ ಒಳಗಾಗಿದ್ದಾನೆ.

ಆರ್.ಟಿ. ನಗರ ನಿವಾಸಿಯಾಗಿರುವ ಆಸೀಫ್‌ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ತಮ್ಮನ್ನು ಪೊಲೀಸ್ ಎಂದು ಪರಿಚಯಿಸಿಕೊಂಡು ಪಾರ್ಕ್‌ಗಳಲ್ಲಿ ಕುಳಿತವರನ್ನು ಟಾರ್ಗೆಟ್ ಮಾಡುತ್ತಿದ್ದನು. ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಸಿ, ಅವರ ಬಳಿ ಇದ್ದ ಆಭರಣ ಹಾಗೂ ಹಣ ಕಿತ್ತುಕೊಳ್ಳುತ್ತಿದ್ದ.

ಈ ಪರವಾಗಿ, ಇಬ್ಬರ ಬಳಿಯಿಂದ 12 ಗ್ರಾಂ ಚಿನ್ನದ ಸರ, 5 ಗ್ರಾಂ ಉಂಗುರ ಮತ್ತು ₹10,000 ನಗದು ಪಡೆದು ಪರಾರಿಯಾಗಿದ್ದನು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಯನಗರ ಪೊಲೀಸರು ಆರೋಪಿ ಆಸೀಫ್‌ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ನಗರದಲ್ಲಿ ಈ ರೀತಿಯ ವಂಚನೆಗೆ ಒಳಗಾಗುವ ಮೊದಲು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಸೂಚನೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *