Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗಂಗೆಗೆ 165 ಲೀಟರ್ ತುಪ್ಪ ಸಮರ್ಪಣೆ: ಭಕ್ತಿಯ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆ

Spread the love

ನವದೆಹಲಿ: ಇತ್ತೀಚೆಗೆ ಜನ ಧಾರ್ಮಿಕ ಭಕ್ತಿಯ ಹೆಸರಿನಲ್ಲಿ ನಾನಾ ರೀತಿಯ ಸಾಹಸಕ್ಕೆ ಮುಂದಾಗುತ್ತಿದ್ದು, ಪರಿಸರಕ್ಕೂ ಹಾನಿ ಮಾಡುತ್ತಿದ್ದಾರೆ.
ಮಧ್ಯಪ್ರದೇಶದ ಸೆಹೋರ್‌ನಲ್ಲಿ ನಡೆದ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ನರ್ಮದಾ ನದಿಗೆ ಸುಮಾರು 11 ಸಾವಿರ ಲೀಟರ್ ಹಾಲು ಸುರಿದ ಬೆನ್ನಲ್ಲೇ ಈಗ ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಗಂಗಾ ನದಿಗೆ ಬರೋಬ್ಬರಿ 165 ಲೀಟರ್ ತುಪ್ಪವನ್ನು ಸುರಿದಿದ್ದಾರೆ.

ಇದು ಪರಿಸರವಾದಿಗಳು ಮತ್ತು ನೆಟ್ಟಿಗರಿಂದ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ.
ಒಂದು ಧಾರ್ಮಿಕ ಆಚರಣೆಯ ಸಮಯದಲ್ಲಿ ಭಕ್ತರು 165 ಲೀಟರ್‌ಗಿಂತ ಹೆಚ್ಚು ದೇಸಿ ತುಪ್ಪವನ್ನು ಗಂಗಾ ನದಿಗೆ ಸುರಿಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯದಲ್ಲಿ ಭಾರೀ ವೈರಲ್ ಆಗಿದೆ.
ಧಾರ್ಮಿಕ ಆಚರಣೆಯ ಭಾಗವಾಗಿ ನಡೆಸಲಾದ ಈ ಕೃತ್ಯವು ನದಿ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *