ನೇಪಾಳದಲ್ಲಿ ಭಾರತೀಯ ಪ್ರವಾಸಿಗೆ ಮುಖಭಂಗ: ರಸ್ತೆಗೆ ಉಗುಳಿದ ಗುಟ್ಕಾ ಕಲೆ ತೊಳೆಯುವಂತೆ ಮಾಡಿದ ಸ್ಥಳೀಯರು

ಕಂಡು: ಬೀದಿಯಲ್ಲಿ ಉಗುಳಿದ ಗುಟ್ಕಾವನ್ನು ಸ್ವಚ್ಛಗೊಳಿಸಲು ನೇಪಾಳದಲ್ಲಿ ಭಾರತೀಯ ಪ್ರವಾಸಿಗನೊಬ್ಬನಿಗೆ ಸ್ಥಳೀಯ ನಿವಾಸಿ ಸೂಚಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಭಾರತೀಯ ಪ್ರವಾಸಿಯೋರ್ವ ಚಲಿಸುವ ಕಾರಿನಿಂದ ಗುಟ್ಕಾವನ್ನು ಬೀದಿಯಲ್ಲಿ ಉಗುಳಿದ್ದಾನೆ. ಈ ವೇಳೆ ನೇಪಾಳದ ನಿವಾಸಿಯೊಬ್ಬರು ಪ್ರವಾಸಿಗರನ್ನು ತಡೆದು. ಇದು ಭಾರತವಲ್ಲ ನೇಪಾಳ, ಬೇಗನೆ ನೀರು ಸುರಿಯಿರಿ” ಎಂದು ಹೇಳುತ್ತಿರುವುದು ಕಂಡು ಬಂದಿದೆ.
ಈ ವೇಳೆ ಪ್ರವಾಸಿಗರು ಮುಜುಗರಕ್ಕೊಳಗಾಗಿ ಕ್ಷಮೆಯಾಚಿಸಿದ್ದಾರೆ. ರಸ್ತೆಯ ಮೇಲಿನ ಕಲೆಗಳನ್ನು ನೀರಿನಿಂದ ಸ್ವಚ್ಛಗೊಳಿಸಿದ್ದಾರೆ.
ವೀಡಿಯೊ ರೆಕಾರ್ಡ್ ಮಾಡಿದ ವ್ಯಕ್ತಿಯು ಭಾರತದಂತಹ ದೊಡ್ಡ ದೇಶದಿಂದ ಪ್ರವಾಸಿಗರು ಬರುತ್ತಿದ್ದಾರೆ ಮತ್ತು ದೇಶವನ್ನು ಕೊಳಕು ಮಾಡುತ್ತಿದ್ದಾರೆ ಎಂದು ಹೇಳುತ್ತಿರುವುದು ಕಂಡು ಬಂದಿದೆ.
ಈ ವೀಡಿಯೊವನ್ನು ಇನ್ಸಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದ್ದು, 60 ಲಕ್ಷಕ್ಕಿಂತಲೂ ಅಧಿಕ ಜನರು ವೀಕ್ಷಕಿಸಿದ್ದಾರೆ. ವೀಡಿಯೊ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನವಾದ ಅಭಿಪ್ರಾಯ ವ್ಯಕ್ತವಾಗಿದೆ. ನಾಗರಿಕ ಪ್ರಜ್ಞೆಯನ್ನು ಕಲಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
