Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಐಪಿಎಲ್ ಇತಿಹಾಸದಲ್ಲಿ ದಾಖಲೆ ಬರೆದ ವೈಭವ್ ಸೂರ್ಯವಂಶಿ: ಜೈಸ್ವಾಲ್-ವೈಭವ್ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಮುಂಬೈ ಇಂಡಿಯನ್ಸ್ ತತ್ತರ

Spread the love

ಗುವಾಹಟಿ: ಮಂಗಳವಾರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ ರಾಜಸ್ಥಾನ ರಾಯಲ್ಸ್‌ನ ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ, ಮುಂಬೈ ಇಂಡಿಯನ್ಸ್‌ನ ಖ್ಯಾತಿವೆತ್ತ ಬೌಲಿಂಗ್ ದಾಳಿಯನ್ನು ಚಿಂದಿ ಉಡಾಯಿಸಿದ್ದಾರೆ.
ಅವರು ಮಳೆ ಬಾಧಿತ ಪಂದ್ಯದಲ್ಲಿ ರಾಜಸ್ಥಾನವನ್ನು 11 ಓವರ್ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 150 ರನ್‌ನತ್ತ ಮುನ್ನಡೆಸಿದರು. ಜೈಸ್ವಾಲ್ 32 ಎಸೆತಗಳಲ್ಲಿ 77 ರನ್‌ಗಳನ್ನು ಸಿಡಿಸಿದರೆ, ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 39 ರನ್‌ಗಳನ್ನು ಬಾರಿಸಿದರು. ಅವರು ಒಟ್ಟು 9 ಸಿಕ್ಸರ್‌ಗಳನ್ನು ಸಿಡಿಸಿದರು. ಅವರು ಮೊದಲ ವಿಕೆಟ್‌ಗೆ ಕೇವಲ ಐದು ಓವರ್‌ಗಳಲ್ಲಿ 82 ರನ್‌ಗಳನ್ನು ಕೂಡಿಸಿದರು.
ಇನಿಂಗ್ಸ್ ಉದ್ದಕ್ಕೂ ಆಸರೆಯಾಗಿ ನಿಂತ ಜೈಸ್ವಾಲ್ 10 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರು. ಸೂರ್ಯವಂಶಿ ಐದು ಸಿಕ್ಸರ್‌ಗಳನ್ನು ಸಿಡಿಸಿದರು. ಈ ಪೈಕಿ ಎರಡು ಸಿಕ್ಸರ್‌ಗಳನ್ನು ಜಸ್‌ಪ್ರೀತ್ ಬುಮ್ರಾರ ಒಂದೇ ಓವರ್‌ನಲ್ಲಿ ಬಾರಿಸಿದರು.
ಈ ಐದು ಸಿಕ್ಸರ್‌ಗಳ ಮೂಲಕ, ಸೂರ್ಯವಂಶಿ ಅವರು ಇಶಾನ್ ಕಿಶನ್ ಮತ್ತು ರಿಶಭ್ ಪಂತ್‌ರ ದಾಖಲೆಯನ್ನು ಮುರಿದರು. ಅವರಿಬ್ಬರು 20 ವರ್ಷ ತುಂಬುವ ಮೊದಲು ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು (ತಲಾ 30) ಗಳಿಸಿದ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದರು. ಸೂರ್ಯವಂಶಿ ಈಗ 35 ಐಪಿಎಲ್ ಸಿಕ್ಸರ್‌ಗಳನ್ನು ತನ್ನ ಹೆಸರಿನಲ್ಲಿ ಹೊಂದಿದ್ದಾರೆ. ಅವರು ಐಪಿಎಲ್‌ನಲ್ಲಿ 30ಕ್ಕಿಂತಲೂ ಅಧಿಕ ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಹದಿಹರೆಯದ ಆಟಗಾರನಾಗಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *