Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೆಲೋಡಿ ಕ್ವೀನ್ ಸುಜಾತಾ ಮೋಹನ್ ಧ್ವನಿ ಮೌನ: ಗಂಟಲಿನ ಸಮಸ್ಯೆಯಿಂದ ಹಾಡುವುದನ್ನೇ ನಿಲ್ಲಿಸಿದ ಗಾಯಕಿ

Spread the love

ದಕ್ಷಿಣ ಭಾರತದ ಖ್ಯಾತ ಗಾಯಕಿ ಸುಜಾತಾ ಮೋಹನ್ ಅವರು ಕಳೆದ ಐದು ವರ್ಷಗಳಿಂದ ತೀವ್ರ ಗಂಟಲಿನ ಸಮಸ್ಯೆಯಿಂದಾಗಿ ಹಾಡುವುದನ್ನು ನಿಲ್ಲಿಸಿರುವ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, “ನನ್ನ ಗಂಟಲಿನಲ್ಲಿ ಸಮಸ್ಯೆಯಿದ್ದು, ಮೊದಲಿನಂತೆ ಈಗ ಹಾಡಲು ಸಾಧ್ಯವಾಗುತ್ತಿಲ್ಲ” ಎಂದು ಭಾವುಕರಾಗಿ ತಿಳಿಸಿದ್ದಾರೆ.

ಕಳೆದ ಐದು ದಶಕಗಳಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 20,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಇವರ ಧ್ವನಿ ಮೌನವಾಗಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.


ಈ ಬೆಳವಣಿಗೆಯ ಬೆನ್ನಲ್ಲೇ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಸಹೋದರಿ ಮತ್ತು ಗಾಯಕಿ ಎ.ಆರ್. ರೈಹಾನಾ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸುಜಾತಾ ಅವರ ಧ್ವನಿಯನ್ನು ಸರಿಪಡಿಸಲು ಸಾಧ್ಯವಿರುವ ವೈದ್ಯರು ಯಾರಾದರೂ ಇದ್ದರೆ ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ‘ರೋಜಾ’ ಚಿತ್ರದ ‘ಪುತ್ತು ವೆಳ್ಳೈ ಮಳೈ’ ಸೇರಿದಂತೆ ಅನೇಕ ಅಜರಾಮರ ಹಾಡುಗಳನ್ನು ನೀಡಿರುವ ‘ಮೆಲೋಡಿ ಕ್ವೀನ್’ ಶೀಘ್ರ ಗುಣಮುಖರಾಗಲಿ ಎಂದು ಸಂಗೀತ ಲೋಕ ಹಾರೈಸುತ್ತಿದೆ


Spread the love
Share:

administrator

Leave a Reply

Your email address will not be published. Required fields are marked *