Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಭಕ್ತಿ ಪರವಶ: ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ!

Spread the love

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಪ್ರಸ್ತುತ ಹಾಲಿವುಡ್​​ನಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್​​ನೊಂದಿಗೆ ಸಂಬಂಧ ಕಡಿದುಕೊಂಡು ಹಲವು ವರ್ಷಗಳಾಗಿದ್ದು ಇದೀಗ ‘ವಾರಣಾಸಿ’ ಸಿನಿಮಾ ಮೂಲಕ ಭಾರತೀಯ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ಸ್ಟಾರ್ ನಟಿಯಾಗಿರುವ ಪ್ರಿಯಾಂಕಾ ಚೋಪ್ರಾ ಅವರ ಜೀವನ ಶೈಲಿಯೂ ಸ್ಟಾರ್ ಮಾದರಿಯಲ್ಲಿಯೇ ಇದೆ. ಪತಿ ನಿಕ್ ಜೋನಸ್ ಜೊತೆಗೆ ಅಮೆರಿಕದ ಪ್ರತಿಷ್ಠಿತ ಬೆವರ್ಲಿ ಹಿಲ್ಸ್​​ನ ಐಶಾರಾಮಿ ಮನೆಯಲ್ಲಿ ವಾಸಿಸುತ್ತಾರೆ. ಆದರೆ ಇದೀಗ ಪ್ರಿಯಾಂಕಾ ಚೋಪ್ರಾ, ಸಾಮಾನ್ಯರಂತೆ, ಸಾಮಾನ್ಯ ಜನ ತಿಂದುಂಡು ಬಿಟ್ಟು ಹೋದ ತಟ್ಟೆ-ಲೋಟಗಳನ್ನು ತೊಳೆದಿದ್ದು, ಆ ವಿಡಿಯೋ ವೈರಲ್ ಆಗಿದೆ.
ಪ್ರಿಯಾಂಕಾ ಚೋಪ್ರಾ, ಹಾಲಿವುಡ್​​ನಲ್ಲಿ ನೆಲೆಸಿದ್ದರೂ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಮರೆತಿಲ್ಲ. ಹಾಲಿವುಡ್​​ನಲ್ಲಿ ನೆಲೆಸಿದ್ದರೂ ಅಲ್ಲಿಯೂ ಸಹ ತಪ್ಪದೇ ಭಾರತೀಯ ಸಂಪ್ರದಾಯದ ಹಬ್ಬಗಳ ಆಚರಣೆಗಳನ್ನು ಸಹ ಮಾಡುತ್ತಲೇ ಇರುತ್ತಾರೆ. ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಭಾರತಕ್ಕೆ ಬಂದಾಗೆಲ್ಲ ಇಲ್ಲಿನ ಕೆಲ ದೇವಾಲಯಗಳಿಗೆ ಸಹ ಭೇಟಿ ನೀಡುತ್ತಾರೆ. ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬಂದಿದ್ದರು. ಈ ಭೇಟಿಯ ಸಂದರ್ಭದಲ್ಲಿ ಅವರು ಅಮೃತಸರದ ಗೋಲ್ಡನ್ ಟೆಂಪಲ್​​ಗೆ ಭೇಟಿ ನೀಡಿದ್ದರು.
ದರ್ಬಾರ್ ಸಾಹೀಬ್ ಎಂದು ಕರೆಯಲಾಗುವ ಸಿಖ್ಖರ ಈ ಪವಿತ್ರ ದೇವಾಲಯದಲ್ಲಿ ಭಕ್ತರು ಸೇವೆ ಮಾಡುತ್ತಾರೆ. ಕಸ ಗುಡಿಸುವುದು, ಪಾತ್ರೆಗಳನ್ನು ತೊಳೆಯುವುದು, ಅಡುಗೆ ಮಾಡುವುದು, ಬಡಿಸುವುದು ಹೀಗೆ ನಾನಾ ರೀತಿಯ ಸೇವೆಗಳನ್ನು ಭಕ್ತರು ಮಾಡುತ್ತಾರೆ. ದೇವಾಲಯಕ್ಕೆ ಭೇಟಿ ನೀಡಿದ್ದ ನಟಿ ಪ್ರಿಯಾಂಕಾ ಚೋಪ್ರಾ ಸಹ ಸೇವೆ ಸಲ್ಲಿಸಿದ್ದು, ದೇವಾಲಯಕ್ಕೆ ಬಂದ ಭಕ್ತರು ಊಟ ತಿಂದ ತಟ್ಟೆಗಳು, ಲೋಟಗಳನ್ನು ತೊಳೆದಿದ್ದಾರೆ. ನಟಿ ಪ್ರಿಯಾಂಕಾ ಅವರು ಈ ‘ಬರ್ತನ್ ಸೇವಾ’ (ಪಾತ್ರೆಗಳ್ನು ತೊಳೆಯುವ ಸೇವೆ) ಮಾಡುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.ಪ್ರಿಯಾಂಕಾ ಚೋಪ್ರಾ ಅವರ ಈ ಸೇವೆಯ ವಿಡಿಯೋಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಹಲವರು ಪ್ರಿಯಾಂಕಾರ ಸೇವೆಯನ್ನು ಮೆಚ್ಚಿ ಕಮೆಂಟ್ ಮಾಡಿದ್ದು, ‘ಗ್ಲೋಬಲ್ ಸ್ಟಾರ್ ಆದರೂ ಸಹ ತಮ್ಮ ಮೂಲವನ್ನು ಪ್ರಿಯಾಂಕಾ ಮರೆತಿಲ್ಲ’ ಎಂದಿದ್ದಾರೆ. ಇನ್ನು ಕೆಲವರು, ‘ವಿದೇಶಿಗನ ಮದುವೆಯಾಗಿ, ವಿದೇಶದಲ್ಲಿ ನೆಲೆಸಿದ್ದರೂ ಸಹ ಭಾರತೀಯ ಸಂಸ್ಕೃತಿಗೆ ಗೌರವ ಕೊಡುವುದು ಪ್ರಶಂಸನಾರ್ಹ’ ಎಂದಿದ್ದಾರೆ. ಆದರೆ ಕೆಲವರು ಇದರಲ್ಲೂ ಕೊಂಕು ಹುಡುಕುವ ಕೆಲಸವನ್ನೂ ಸಹ ಮಾಡಿದ್ದಾರೆ. ‘ತಮ್ಮ ಮುಂದಿನ ಸಿನಿಮಾದ ಪ್ರಚಾರಕ್ಕಾಗಿ ಹೀಗೆ ಪೂರ್ವ ಸಿದ್ಧತೆ ಮಾಡುತ್ತಿದ್ದಾರೆ’ ಎಂದೆಲ್ಲ ವ್ಯಂಗ್ಯ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ನಟನೆಯ ಹಾಲಿವುಡ್ ಆಕ್ಷನ್ ಸಿನಿಮಾ ‘ದಿ ಬ್ಲಫ್’ ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾದವು. ಇದೀಗ ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಹಾಲಿವುಡ್ ಆಕ್ಷನ್ ಸಿನಿಮಾ ‘ಜಡ್ಜ್​ಮೆಂಟ್ ಡೇ’ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಆ ಸಿನಿಮಾ ಸಹ ಇದೇ ವರ್ಷ ಬಿಡುಗಡೆ ಆಗಲಿದೆ.


Spread the love
Share:

administrator

Leave a Reply

Your email address will not be published. Required fields are marked *