Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಕ್ಷಿತ್ ಶೆಟ್ಟಿಯ ಪರಮಾಹ್ ಸ್ಟುಡಿಯೋಸ್‌ಗೆ 25 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

Spread the love

ಹೊಸದಿಲ್ಲಿ: ‘ಬ್ಯಾಚುಲ‌ರ್ ಪಾರ್ಟಿ’ ಸಿನಿಮಾದಲ್ಲಿ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿದ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ರಕ್ಷಿತ್ ಶೆಟ್ಟಿ ನೇತೃತ್ವದ ಪರಮ್ಹಾಹ್ ಸ್ಟುಡಿಯೋಸ್ ಗೆ 25 ಲಕ್ಷ ರೂ. ಪಾವತಿಸಲು ಆದೇಶಿಸಿದೆ.
MRT ಮ್ಯೂಸಿಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತೇಜಸ್ ಕರಿಯಾ ಅವರು, ಇದು ಕೃತಿಸ್ವಾಮ್ಯ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದಲ್ಲಿ “ಒಮ್ಮೆ ನಿನ್ನನು” ಹಾಡು 31 ಸೆಕೆಂಡುಗಳು ಹಾಗೂ “ನ್ಯಾಯ ಎಲ್ಲಿದೆ” ಹಾಡು 7 ಸೆಕೆಂಡುಗಳು ಬಳಸಲಾಗಿದೆ. ಸ್ವಲ್ಪ ಸಮಯ ಮಾತ್ರ ಬಳಸಿದ್ದೇವೆ ಎಂಬ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ಒಂದು ಸೆಕೆಂಡಿನ ದೃಶ್ಯವನ್ನೂ ಬಳಸಲು ಸಹ ಮಾಲೀಕರ ಅನುಮತಿ ಬೇಕು ಎಂದು ಸ್ಪಷ್ಟಪಡಿಸಿದೆ.

ಈ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಸಮಯಕ್ಕೆ ಪಾಲಿಸದ ಕಾರಣ, ರಕ್ಷಿತ್ ಶೆಟ್ಟಿ ಹಾಗೂ ಸ್ಟುಡಿಯೋಗೆ ಹೆಚ್ಚುವರಿಯಾಗಿ 5 ಲಕ್ಷ ರೂ. ದಂಡ ವಿಧಿಸಲಾಗಿದೆ. ಜೈಲು ಶಿಕ್ಷೆಯಿಂದ ವಿನಾಯಿತಿ ನೀಡಲಾಗಿದೆ.
ಇದಕ್ಕೂ ಮುನ್ನ, 2024ರ ಆಗಸ್ಟ್ 12ರಂದು ನ್ಯಾಯಾಲಯ 20 ಲಕ್ಷ ರೂ. ಠೇವಣಿ ಇಡಲು ಹಾಗೂ ವಿವಾದಿತ ಭಾಗಗಳನ್ನು ತೆಗೆದುಹಾಕಲು ಸೂಚಿಸಿತ್ತು. ಆದರೆ ಇದನ್ನು ಸಮಯಕ್ಕೆ ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ವಿಚಾರಣೆ ನಡೆಯಿತು. ನಂತರ ಹಣ ಠೇವಣಿ ಇಡಲಾದರೂ, ವಿಳಂಬವಾಗಿರುವುದು ಗಮನಿಸಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.
ಚಿತ್ರತಂಡವು “ಇದು ಕಡಿಮೆ ಬಳಕೆ” ಎಂದು ವಾದಿಸಿದರೂ, ಹಾಡುಗಳನ್ನು ಕಥೆಗೆ ಸಂಬಂಧಪಟ್ಟಂತೆ ಉದ್ದೇಶಪೂರ್ವಕವಾಗಿ ಬಳಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ “ಡಿ ಮಿನಿಮಿಸ್” ವಿನಾಯಿತಿ ಅನ್ವಯಿಸುವುದಿಲ್ಲ ಎಂದು ತೀರ್ಪು ನೀಡಿದೆ.
ನ್ಯಾಯಾಲಯದ ಆದೇಶದಂತೆ, ಈಗಾಗಲೇ ಠೇವಣಿ ಇಡಲಾದ 20 ಲಕ್ಷ ರೂ. MRT ಮ್ಯೂಸಿಕ್ ಗೆ ನೀಡಬೇಕು. ಜೊತೆಗೆ 5 ಲಕ್ಷ ರೂ. ಹೆಚ್ಚುವರಿ ದಂಡ ಪಾವತಿಸಬೇಕು ಎಂದು ಆದೇಶ ನೀಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *