Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದುಬೈ ಬಂದರಿನಲ್ಲಿ ಕುವೈತ್ ತೈಲ ಟ್ಯಾಂಕರ್ ಮೇಲೆ ಇರಾನ್ ಅಟ್ಯಾಕ್; ಹಡಗಿನಲ್ಲಿ ಕಾಣಿಸಿಕೊಂಡ ಭಾರಿ ಬೆಂಕಿ

Spread the love

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈ ಬಂದರಿನಲ್ಲಿ ಲಂಗರು ಹಾಕಿದ್ದ ಕುವೈತ್‌ ತೈಲ ಟ್ಯಾಂಕರ್ ‘ಅಲ್-ಸಲ್ಕಿ ಮೇಲೆ ಇರಾನ್ ನೇರ ದಾಳಿ ನಡೆಸಿದೆ ಎಂದು ಕುವೈತ್‌ ಪೆಟ್ರೋಲಿಯಂ ಕಾರ್ಪೊರೇಷನ್ (ಕೆಪಿಸಿ) ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಕುವೈತ್‌ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ದಾಳಿ ಸಂಭವಿಸಿದ ವೇಳೆ ಟ್ಯಾಂಕರ್ ನಲ್ಲಿ ತೈಲ ಭರ್ತಿಯಾಗಿತ್ತು. ದಾಳಿಯಿಂದ ಹಡಗಿನ ಹೊರಭಾಗಕ್ಕೆ ಹಾನಿಯಾಗಿದ್ದು, ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಾಳಿಯ ಪರಿಣಾಮವಾಗಿ ಸುತ್ತಮುತ್ತಲಿನ ಸಮುದ್ರದ ನೀರಿನಲ್ಲಿ ತೈಲ ಸೋರಿಕೆ ಸಂಭವಿಸುವ ಸಾಧ್ಯತೆ ಇದೆ ಎಂದು ಕೆಪಿಸಿ ತಿಳಿಸಿದೆ.
ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಹಾನಿಯ ನಿಖರ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು ಘಟನೆ ಕುರಿತು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಕುವೈತ್‌ನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗೆ ಸೇರಿದ ಹಡಗು ಎಂದು ತಿಳಿದು ಬಂದಿದೆ. ಶತ್ರುದೇಶದ ಕ್ಷಿಪಣಿ ಹಾಗೂ ಡೋನ್ ದಾಳಿಗೆ ಕುವೈತ್‌ನ ವಾಯು ರಕ್ಷಣಾ ವ್ಯವಸ್ಥೆ ಸೂಕ್ತವಾಗಿ ಸ್ಪಂದಿಸುತ್ತಿದೆ ಎಂದು ಕುವೈತ್ ಸೇನೆ ಹೇಳಿದೆ.


Spread the love
Share:

administrator

Leave a Reply

Your email address will not be published. Required fields are marked *