ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದ ಖಾಸಗಿ ಬಸ್; ಹಲವು ಪ್ರಯಾಣಿಕರಿಗೆ ಗಾಯ

ಶಿವಮೊಗ್ಗ: ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಖಾಸಗಿ ಬನ್ನೊಂದು ಸೇತುವೆಯಿಂದ ಉರುಳಿಬಿದ್ದ ಘಟನೆ ಭದ್ರಾವತಿ ತಾಲೂಕಿನ ವೀರಾಪುರ ಸಮೀಪದ ಕಾಗೆಹಳ್ಳ ಎಂಬಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ ಅನೇಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಾವಣಗೆರೆಯಿಂದ ಹೊರಟಿದ್ದ ಬಸ್ ಚನ್ನಗಿರಿ ದಾಟಿ ಕಾಗೇಹಳ್ಳ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಈ ಸಂದರ್ಭ ಬಸ್ನಲ್ಲಿ 35 ಮಂದಿ ಪ್ರಯಾಣಿಕರಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಕಾಲು ಮುರಿದಿದ್ದರೆ, ಮೂರ್ನಾಲ್ಕು ಮಂದಿಗೆ ತೀವ್ರತರದ ಗಾಯಗಳಾಗಿವೆ.
ಬಸ್ ಚಾಲಕನಿಗೂ ತೀವ್ರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಸ್ಥರು ಬಸ್ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಗಾಯಾಳುಗಳನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
